ಚಿಕ್ಕಮಗಳೂರು: ಅನ್ಯ ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
Advertisement
ಈ ಕಾಲೇಜಿನಲ್ಲಿ ಈ ರೀತಿ ಶಲ್ಯ-ಸ್ಕಾರ್ಫ್ ವಿವಾದ ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳ ಹಿಂದೆಯೂ ಬಾಳಗಡಿ ಕಾಲೇಜಿನಲ್ಲಿ ಸ್ಕಾರ್ಫ್ ವರ್ಸಸ್ ಕೇಸರಿ ಶಲ್ಯ ವಿವಾದ ತಲೆದೂರಿತ್ತು. ಆಗ ಪೋಷಕರು ಹಾಗೂ ಪ್ರಾಂಶುಪಾಲರು ಸಭೆ ನಡೆಸಿ ವಿವಾದವನ್ನು ತಿಳಿಗೊಳಿಸಿದ್ದರು. ಆದರೆ, ಈಗ ಮತ್ತೆ ಕಾಲೇಜಿನಲ್ಲಿ ಸ್ಕಾರ್ಫ್ ವಿರುದ್ಧ ಕೇಸರಿ ಶಲ್ಯದ ಅಭಿಯಾನ ಆರಂಭವಾಗಿದೆ. ಈ ವಿವಾದ ಮತ್ತೆ ಇನ್ನೆಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಇದನ್ನೂ ಓದಿ: ಹಿಜಬ್ ಹೋರಾಟ ನಿಲ್ಲಿಸಿ – ಕೇಸರಿ ರುಮಾಲು, ಸ್ಲೀವ್ ಲೆಸ್, ಜೀನ್ಸ್ ಬಂದ್ರೆ ನಾವು ಜವಾಬ್ದಾರರಲ್ಲ: ರಘುಪತಿ ಭಟ್
Advertisement
Advertisement
ವಿದ್ಯಾರ್ಥಿಗಳ ಈ ನಡೆ ದೊಡ್ಡದಾಗುವ ಮುನ್ನ ಬಗೆಹರಿಸಬೇಕಾದ ಜವಾಬ್ದಾರಿ ಕಾಲೇಜು ಆಡಳಿತ ವರ್ಗದ್ದಾಗಿದೆ. ಆದರೆ, ಕಾಲೇಜು ಆಡಳಿತ ಮಂಡಳಿ ಏನು ಮಾಡುತ್ತೋ ಕಾದು ನೋಡಬೇಕು. ಆದರೆ, ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಯಸ್ಸಲ್ಲಿ ವಿದ್ಯಾರ್ಥಿಗಳ ನಡೆ ಸರಿಯಲ್ಲ ಎಂಬ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಈ ಮಧ್ಯೆ ಶಾಲಾ-ಕಾಲೇಜುಗಲು ಜ್ಞಾನದ ದೇಗುಲ. ಇಲ್ಲಿ ಜಾತಿ-ಧರ್ಮ ಇರುವುದಿಲ್ಲ. ಎಲ್ಲರೂ ಒಂದೇ ಎಂಬ ಮಾತುಗಳು ಕೇಳಿ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ
Advertisement