ರಾಯಚೂರು: ಗಾಂಜಾ ಮಿಶ್ರಿತ ಚಾಕ್ಲೇಟ್ (Chocolate) ಮಾರಾಟ ದೂರು ಹಿನ್ನೆಲೆಯಲ್ಲಿ ರಾಯಚೂರಿನ ವಿವಿಧೆಡೆ ಅಬಕಾರಿ ಪೊಲೀಸರು (Excise Police) ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ.
Advertisement
ಜಿಲ್ಲೆಯಲ್ಲಿ 8 ತಂಡ ರಚಿಸಿ ದಾಳಿ ನಡೆಸಿದ ಅಬಕಾರಿ ಪೊಲೀಸರು ನಗರದ ವಿವಿಧೆಡೆ ಕಿರಾಣಿ ಅಂಗಡಿ, ಪಾನ್ ಡಬ್ಬಾ ಅಂಗಡಿಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಆದರೆ ರಾಯಚೂರು ನಗರದಲ್ಲಿ ಎಲ್ಲೂ ಗಾಂಜಾ (Ganja) ಮಿಶ್ರಿತ ಚಾಕ್ಲೆಟ್ ಪತ್ತೆಯಾಗಿಲ್ಲ. ದಾಳಿ ಮುಂದುವರಿದಿದ್ದು ಸಾರ್ವಜನಿಕರಲ್ಲಿ ಚಾಕ್ಲೆಟ್ ಬಗ್ಗೆ ಮಾಹಿತಿ ಇದ್ರೆ ಕೂಡಲೇ ಸಂಪರ್ಕಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ತಾಯಿ ಅಗಲಿಕೆ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್‌ಪೆಕ್ಟರ್ – ಕುಖ್ಯಾತ ಕಳ್ಳನನ್ನು ಬಂಧಿಸಿ ಭಾರೀ ಮೆಚ್ಚುಗೆ
Advertisement
Advertisement
ಯಾದಗಿರಿ ಜಿಲ್ಲೆಯ ಶಹಪುರ, ಸುರಪುರದಲ್ಲಿ 7500 ಹೆಚ್ಚು ಚಾಕ್ಲೇಟ್ ಪತ್ತೆ ಹಿನ್ನೆಲೆ, ಜಿಲ್ಲೆಯಲ್ಲೂ ಮಾರಾಟ ಬಗ್ಗೆ ಅನಾಮಧೇಯ ಬಾತ್ಮಿ, ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ. ಆದರೆ ಏಕಾಏಕಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಕಿರಾಣಿ ಅಂಗಡಿಗಳ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಗಳಲ್ಲಿನ ವಸ್ತುಗಳನ್ನೆಲ್ಲಾ ಹೊರಗೆ ಹಾಕಿ ಪರಿಶೀಲನೆ ಮಾಡಿರುವುದರಿಂದ ಇದು ಸರಿಯಾದ ಕ್ರಮ ಅಲ್ಲಾ ಅಂತ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ.