DharwadDistrictsKarnatakaLatestMain Post

ತಾಯಿ ಅಗಲಿಕೆ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್‌ಪೆಕ್ಟರ್ – ಕುಖ್ಯಾತ ಕಳ್ಳನನ್ನು ಬಂಧಿಸಿ ಭಾರೀ ಮೆಚ್ಚುಗೆ

ಹುಬ್ಬಳ್ಳಿ: ಸಿನಿಮೀಯ ರೀತಿಯಲ್ಲಿ ಕಳ್ಳತನ (Theft) ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಠಾಣೆ ಇನ್ಸ್‌ಪೆಕ್ಟರ್ ರವಿಚಂದ್ರ (Inspector Ravichandra) ಬಡಫಕೀರಪ್ಪನವರ್ ಯಶಸ್ವಿಯಾಗಿದ್ದಾರೆ. ತಮ್ಮ ತಾಯಿಯ ಅಗಲಿಕೆ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಇನ್ಸ್‌ಪೆಕ್ಟರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಒಂದೇ ವಾರದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ಅವಳಿ ನಗರದಲ್ಲಿ ನಡೆದಿದ್ದವು. ಆಗ ಉಪನಗರ ಠಾಣೆಯಲ್ಲೂ ಕೂಡ ಕಳ್ಳತನವಾಗಿತ್ತು. ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ರವಿಚಂದ್ರ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೆ ತಾಯಿ ಅಗಲಿಕೆ ನಡುವೆಯೇ 3 ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕೆಲಸ ಮಾಡದೇ ಬಿಲ್ ಮಾಡಿಕೊಂಡಿರುವ 100% ಅಕ್ರಮ ಪಕ್ಷ ಕಾಂಗ್ರೆಸ್: ಲಕ್ಷ್ಮಣ ಸವದಿ

ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಅವರು, ಬಳ್ಳಾರಿ ಮೂಲದ ಗಣೇಶ್ ಕಾಲೋನಿಯ ಶ್ರೀಕಾಂತ್(26) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ, ನಗರದ ಮಿಷನ್ ಕಂಪೌಂಡ್ ಹತ್ತಿರ ಮನೆಯೊಂದರಲ್ಲಿ 3,20,000 ರೂ. ಮೌಲ್ಯದ 71 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 1,00,000 ರೂ. ಹಣವನ್ನು ಕಳ್ಳತನ ಮಾಡಿದ್ದ.

3 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಿಂದ 6,95,000 ರೂ. ಮೌಲ್ಯದ 165 ಗ್ರಾಂ ತೂಕದ ಬಂಗಾರದ ಆಭರಣಗಳು, 1,000 ರೂ. ಮೌಲ್ಯದ 20 ಗ್ರಾಂ ಬೆಳ್ಳಿ ಆಭರಣ ಮತ್ತು 30,000 ರೂ. ನಗದನ್ನು ಜಪ್ತಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಲಾಗಿದೆ. ರವಿಚಂದ್ರ ಅವರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಲಾಬೂರಾಮ್ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯನ್ನು ವಿಭಜಿಸಲು ಸಿಎಂಗೆ ಒಳ್ಳೆ ಬುದ್ಧಿ ನೀಡಲಿ- ಭಕ್ತನಿಂದ ಸವದತ್ತಿ ಯಲ್ಲಮ್ಮನಿಗೆ ಹರಕೆ

Live Tv

Leave a Reply

Your email address will not be published.

Back to top button