– 77ನೇ ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ
ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ಐತಿಹಾಸಿಕ ಯಶಸ್ಸಿಗೆ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯೇ ಕಾರಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬಣ್ಣಿಸಿದ್ದಾರೆ.
77ನೇ ಗಣರಾಜ್ಯೋತ್ಸವದ (77th Republic Day) ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, 2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದ ನಂತರ ಭಾರತ ನೀಡಿದ ಪ್ರತ್ಯುತ್ತರವನ್ನು ಉಲ್ಲೇಖಿಸಿದರು. ವಿಶ್ವದ ಅನೇಕ ಭಾಗಗಳಲ್ಲಿ ಸಂಘರ್ಷಗಳಿಂದ ಕೂಡಿದ ವಾತಾವರಣದಲ್ಲಿ, ಭಾರತವು ಶಾಂತಿಯ ಸಂದೇಶವನ್ನು ಹರಡುತ್ತಿದೆ ತಿಳಿಸಿದ್ದಾರೆ. ಇದನ್ನೂ ಓದಿ: 70 ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ
‘ವಂದೇ ಮಾತರಂ’ ಗೀತೆಯ ಪರಂಪರೆಯನ್ನು ಒತ್ತಿ ಹೇಳಿದ ಅಧ್ಯಕ್ಷ ಮುರ್ಮು, ರಾಷ್ಟ್ರೀಯ ಗೀತೆಯು ಭಾರತ ಮಾತೆಯ ದೈವಿಕ ರೂಪಕ್ಕೆ ಪ್ರಾರ್ಥನೆಯಾಗಿದೆ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯನ್ನು ತುಂಬುತ್ತದೆ ಎಂದರು. ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ರಾಷ್ಟ್ರೀಯ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 7 ರಿಂದ ನಮ್ಮ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯ 150 ವರ್ಷಗಳನ್ನು ಗುರುತಿಸುವ ಆಚರಣೆಗಳನ್ನು ಸಹ ಆಯೋಜಿಸಲಾಯಿತು. ಭಾರತ ಮಾತೆಯ ದೈವಿಕ ರೂಪಕ್ಕೆ ಪ್ರಾರ್ಥನೆಯಾಗಿರುವ ಈ ಹಾಡು ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯನ್ನು ತುಂಬುತ್ತದೆ ಎಂದು ಮಾತನಾಡಿದ್ದಾರೆ.
ಮಹಾನ್ ರಾಷ್ಟ್ರೀಯವಾದಿ ಕವಿ ಸುಬ್ರಹ್ಮಣ್ಯ ಭಾರತಿ ಅವರು ‘ವಂದೇ ಮಾತರಂ ಯೆನ್ಬೋಮ್’ ಎಂಬ ತಮಿಳು ಗೀತೆಯನ್ನು ರಚಿಸಿದರು. ಇದರ ಅರ್ಥ ‘ವಂದೇ ಮಾತರಂ ಪಠಿಸೋಣ’. ಈ ಹಾಡಿನ ಇತರ ಭಾರತೀಯ ಭಾಷೆಗಳಲ್ಲಿ ಅನುವಾದಗಳು ಸಹ ಜನಪ್ರಿಯವಾದವು. ಶ್ರೀ ಅರಬಿಂದೋ ಈ ಹಾಡನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಪೂಜ್ಯ ಬಂಕಿಮ್ ಚಂದ್ರ ಚಟರ್ಜಿ ಅವರು ಸಂಯೋಜಿಸಿದ ‘ವಂದೇ ಮಾತರಂ’ ನಮ್ಮ ಸಾಹಿತ್ಯಿಕ ರಾಷ್ಟ್ರೀಯ ಪ್ರಾರ್ಥನೆಯಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮೈಸೂರು ಮೂಲದ ಎಂ.ಪುಟ್ಟಮಾದಯ್ಯ ಸೇರಿ ಐವರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ

