– ಕೊಹ್ಲಿಗಾಗಿ ಟೀಂ ಇಂಡಿಯಾ ಹೋರಾಡಲಿದೆ
– ಭಾರತ – ಪಾಕ್ ಪಂದ್ಯಕ್ಕಾಗಿ ಕಾಯುತ್ತಿದ್ದೇನೆ ಎಂದ ಸೆಹ್ವಾಗ್
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ (ICC WorldCup 2023) ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಈ ಬಾರಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಭವಿಷ್ಯ ನುಡಿದಿದ್ದಾರೆ.
1987 ಮತ್ತು 1996ರಲ್ಲಿ ಭಾರತ-ಪಾಕಿಸ್ತಾನ (India – Pakistan) ಮತ್ತು 2011ರಲ್ಲಿ ಭಾರತ-ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸಿದೆ. ಆದ್ರೆ ಇಂಗ್ಲೆಂಡ್ 4 ಬಾರಿ ಸ್ವತಃ ಆತಿಥ್ಯ ವಹಿಸಿದ್ದು, 2019ರಲ್ಲಿ ವೇಲ್ಸ್‌ನೊಂದಿಗೆ ಜಂಟಿ ಆತಿಥ್ಯ ವಹಿಸಿತ್ತು. ಟೀಂ ಇಂಡಿಯಾ (Team India) ಇದೇ ಮೊದಲಬಾರಿಗೆ ಏಕಾಂಗಿಯಾಗಿ ಆತಿಥ್ಯ ವಹಿಸಿಕೊಂಡಿದ್ದು, ತವರಿನಲ್ಲೇ ಟ್ರೋಫಿಗೆಲ್ಲುವ ತವಕದಲ್ಲಿದೆ. ಇದನ್ನೂ ಓದಿ: ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್
Advertisement
Advertisement
ಆ ದಿನಕ್ಕಾಗಿ ಕಾದಿರುವೆ:
ಮುಂದುವರಿದು ಮಾತನಾಡಿ, ಆದಿನ ಏನಾಗುತ್ತೆ ಅನ್ನೋದು ನಿಜಕ್ಕೂ ನನಗೆ ಗೊತ್ತಿಲ್ಲ. ಆದ್ರೆ ಒತ್ತಡ ನಿಭಾಯಿಸುವ ತಂಡಕ್ಕೆ ಯಶಸ್ಸು ಒಲಿಯುವುದು ನಿಶ್ಚಿತ. ಭಾರತ ತಂಡ ಖಂಡಿತವಾಗಿಯೂ ಅಂತಹ ಒತ್ತಡ ನಿಭಾಯಿಸಿ ಗೆಲುವು ದಾಖಲಿಸಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡ ಈವರೆಗೆ ವಿಶ್ವಕಪ್‌ನಲ್ಲಿ ಭಾರತದ ಎದುರು ಗೆದ್ದಿಲ್ಲ. 1990ರ ಸಮಯದಲ್ಲಿ ಪಾಕಿಸ್ತಾನ ತಂಡ ಒತ್ತಡ ನಿಭಾಯಿಸಿ ಪಂದ್ಯಗಳನ್ನ ಗೆಲ್ಲುವುದರಲ್ಲಿ ನಿಸ್ಸೀಮವಾಗಿತ್ತು. 2000 ಇಸವಿಯ ನಂತರ ಭಾರತ ಆ ಸ್ಥಿತಿಗೆ ತಲುಪಿದೆ ಆದ್ದರಿಂದ ಆ ದಿನವನ್ನು ಕಾದು ನೋಡಬೇಕು ಎಂದು ಸೆಹ್ವಾಗ್ ತಿಳಿಸಿದ್ದಾರೆ.
Advertisement
Advertisement
ಕೊಹ್ಲಿಗಾಗಿ ಹೋರಾಡಲಿದ್ದಾರೆ:
ಭಾರತ ತಂಡ 2011ರಲ್ಲಿ ಕೊನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿತ್ತು. ಅಂದು ಟೀಂ ಇಂಡಿಯಾ ಆಟಗಾರರು ಸಚಿನ್ ತೆಂಡೂಲ್ಕರ್ ಸಲುವಾಗಿ ವಿಶ್ವಕಪ್ ಗೆಲ್ಲುವ ಪಣತೊಟ್ಟು ಆಡಿದ್ದರು. ಈ ಬಾರಿ ಭಾರತ ತಂಡದ ಆಟಗಾರರು ವಿರಾಟ್ ಕೊಹ್ಲಿಗಾಗಿ ಕಪ್ ಗೆದ್ದು ಕೊಡಲು ಹೋರಾಟಲಿದ್ದಾರೆ. ಆಟಗಾರರ ಮನದಲ್ಲಿ ಅದೇ ಭಾವನೆ ಕಾಣಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ Vs ಐರ್ಲೆಂಡ್ T20 ಸರಣಿಗೆ ವೇಳಾಪಟ್ಟಿ ಪ್ರಕಟ – ಇಲ್ಲಿದೆ ಡಿಟೇಲ್ಸ್
ಕೊಹ್ಲಿ ಅಬ್ಬರಿಸೋದು ಖಚಿತ:
ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲು ಕಾಯ್ತಿದ್ದಾರೆ. ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಆಟ ವೀಕ್ಷಣೆ ಮಾಡಬಹುದಾಗಿದೆ. ಅಲ್ಲಿನ ಪಿಚ್ ಹೇಗಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಖಂಡಿತಾ ಅವರು ಹೆಚ್ಚು ರನ್ ಗಳಿಸುತ್ತಾರೆ ಅನ್ನೋ ವಿಶ್ವಾಸ ನನಗಿದೆ. ಇನ್ನೂ ಎಲ್ಲರ ಕಣ್ಣು ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದ ಮೇಲಿದೆ. ನಾನು ಕೂಡ ಆ ಪಂದ್ಯವನ್ನೇ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
Web Stories