ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ

Public TV
1 Min Read
siva karthikeyan

ಸೀತಾ ಆಗಿ ಸಂಚಲನ ಸೃಷ್ಟಿಸಿದ ಮರಾಠಿ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಇದೀಗ ‘ಸೀತಾರಾಮಂ’ (Seetharamam) ಸಿನಿಮಾ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ಬೆನ್ನಲ್ಲೇ ತಮಿಳು ಇಂಡಸ್ಟ್ರಿಗೆ(Kollywood) ನಟಿ ಲಗ್ಗೆ ಇಡ್ತಿದ್ದಾರೆ. ಸ್ಟಾರ್ ಹೀರೋಗೆ ಜೋಡಿಯಾಗುವ ಮೂಲಕ ಮೃಣಾಲ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಕೆರಿಯರ್‌ನಲ್ಲಿ ಪ್ರಚಾರ ಬೇಕು ಅಂದ್ರೆ ಇದನ್ನೆಲ್ಲಾ ಮಾಡಬೇಕು- ತಮನ್ನಾ ಭಾಟಿಯಾ

mrunal thakur

ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗುವ ಮೂಲಕ ಮೃಣಾಲ್ ಠಾಕೂರ್ ಗಮನ ಸೆಳೆದಿದ್ದರು. ಸೀತೆಯಾಗಿ ಅಭಿಮಾನಿಗಳ ದಿಲ್ ಕದ್ದರು. ಬಳಿಕ ಬಾಲಿವುಡ್- ಟಾಲಿವುಡ್ ಮೃಣಾಲ್ ಹಂಗಾಮ ಶುರುವಾಯ್ತು. ಈಗ ಕಾಲಿವುಡ್‌ಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ಜೊತೆ ಸೀತಾ ರೊಮ್ಯಾನ್ಸ್ ಮಾಡಲಿದ್ದಾರೆ.

mrunal

ಎಆರ್ ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ಶಿವಕಾರ್ತಿಕೇಯನ್- ಮೃಣಾಲ್ ಜೋಡಿಯಾಗಿ ಕಾಣಿಸಿಕೋಳ್ತಿದ್ದಾರೆ. ವಿಭಿನ್ನ ಪ್ರೇಮಕಥೆ ಜೊತೆ ಆ್ಯಕ್ಷನ್ ಕೂಡ ಇರಲಿದ್ದು, ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಮೊದಲ ಬಾರಿಗೆ ಒಂದಾಗ್ತಿರೋ ಶಿವಕಾರ್ತಿಕೇಯನ್- ಮೃಣಾಲ್ ಜೋಡಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಸದ್ಯದಲ್ಲಿಯೇ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article