ಬಿಡುಗಡೆಯಾಯ್ತು `ಸೀತಾರಾಮ ಕಲ್ಯಾಣ’ ಟೀಸರ್- ಬಿಡುಗಡೆಯಾದ ಒಂದೇ ದಿನಕ್ಕೆ ಟಾಪ್ 1 ಟ್ರೆಂಡಿಂಗ್

Public TV
1 Min Read
nikhil 2

ರಾಮನಗರ: ಬಹುನಿರೀಕ್ಷಿತ ಸ್ಯಾಂಡಲ್‍ವುಡ್‍ನ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಮಂಗಳವಾರ ರಾಮನಗರದಲ್ಲಿ ನಾಡದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದರು.

ಈ ಟೀಸರ್ ನಲ್ಲಿ ಬರೀ ಆ್ಯಕ್ಷನ್ ಸೀನ್‍ಗಳೇ ಇದ್ದು, ಆ್ಯಕ್ಷನ್ ಸೀನ್ ಇಷ್ಟಪಡುವ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂಬುದನ್ನು ಸಿನಿಮಾ ಟೀಸರ್ ಸಾಬೀತು ಮಾಡುತ್ತಿದೆ. ಈ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿದೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಶಾಸಕ ಮುನಿರತ್ನ, ನಿರ್ದೇಶಕ ಹರ್ಷ, ನಟ ನಿಖಿಲ್ ಕುಮಾರ್, ನಟಿ ರಚಿತಾ ರಾಮ್, ಹಾಸ್ಯನಟ ಚಿಕ್ಕಣ್ಣ, ಲಹರಿ ಮ್ಯೂಸಿಕ್‍ನ ವೇಲು ಜೊತೆಗೆ ಸೀತಾರಾಮ ಕಲ್ಯಾಣ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

nikhil

ಇದೇ ವೇಳೆ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ನಮ್ಮ ಕುಟುಂಬದವರೆಲ್ಲರೂ ರಾಜಕೀಯ ರಂಗದಲ್ಲೇ ಇದ್ದೇವೆ. ಆದರೆ ನನ್ನ ಮಗ ನಿಖಿಲ್‍ನ ಒಲವು ಸಿನಿಮಾ ರಂಗದ ಮೇಲಿದೆ. ಕುರುಕ್ಷೇತ್ರದಲ್ಲಿ ನಿಖಿಲ್ ಅದ್ಭುತವಾಗಿ ಅಭಿನಯ ಮಾಡಿದ್ದಾನೆ. ಯುದ್ಧದ ಸನ್ನಿವೇಶದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮನ್ಯು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಈ ಚಿತ್ರದಲ್ಲೂ ಕೂಡಾ ಉತ್ತಮವಾಗಿ ನಿಖಿಲ್ ಅಭಿನಯಿಸಿದ್ದಾನೆ ಎಂದು ತಿಳಿಸಿದ್ದರು.

 

ರಾಜಕೀಯವಾಗಿ ವಿರೋಧಿಗಳು ಅಸೂಯೆಯಿಂದ ಮೂರ್ನಾಲ್ಕು ಜಿಲ್ಲೆಯ ಸಿಎಂ ಎಂದು ಲೇವಡಿ ಮಾಡ್ತಾರೆ. ಆದರೆ ನಾನು ಅಖಂಡ ಕರ್ನಾಟಕದ ಸಿಎಂ, ನನ್ನನ್ನ ಈ ಮಟ್ಟಕ್ಕೆ ಬೆಳೆಸಿದವರು, ನನಗೋಸ್ಕರ ದುಡಿಮೆ ಮಾಡಿದವರು ರಾಮನಗರದವರು ಎಂದು ತಿಳಿಸಿದರು. ಅಲ್ಲದೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಅರಿಯಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎರಡೆರಡು ದಿನಗಳ ವಾಸ್ತವ್ಯ ಹೂಡುತ್ತೇನೆ. ರಾಜ್ಯದ ರಾಜಕೀಯ ಸ್ಥಿರವಾದ ಬಳಿಕ ರಾಮನಗರದ ಪ್ರತಿಹಳ್ಳಿಗೂ ಸಹ ಬರುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *