ಮುಂಬೈ ಬ್ಯೂಟಿ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ಇಂದು (ಏ.5) ರಿಲೀಸ್ ಆಗಿದೆ. ಈ ಬೆನ್ನಲ್ಲೇ ‘ಸೀತಾ ರಾಮಂ’ ನಟಿ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಮೃಣಾಲ್‌ಗೆ ಸಿಕ್ಕಿದೆ.

ಮುಂಬರುವ ಸಿನಿಮಾಗಾಗಿ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

ಸದ್ಯ ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿಸಿದ ‘ಫ್ಯಾಮಿಲಿ ಸ್ಟಾರ್’ ಚಿತ್ರ ರಿಲೀಸ್ ಆಗಿ ಮೃಣಾಲ್ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


