90ರ ದಶಕದ ಬಾಲನಟಿ ಸಿಂಧು ರಾವ್ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್

Public TV
2 Min Read
sindhu rao

ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ರವಿಚಂದ್ರನ್, ಶಿವಣ್ಣ ಜೊತೆ ತೆರೆಹಂಚಿಕೊಂಡಿದ್ದ ನಟಿ ಸಿಂಧು ರಾಮ್ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ವಿದ್ಯಾಭ್ಯಾಸದತ್ತ ಗಮನ ಹರಿಸಲು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಸಿಂಧು ವೈವಾಹಿಕ ಬದುಕಿನ ಜಂಜಾಟದಲ್ಲಿ ಆಕ್ಟಿಂಗ್‌ಗೆ ಗುಡ್ ಬೈ ಹೇಳಿದ್ದರು. 90ರ ದಶಕದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ರಾವ್ (Sindhu Rao) ಮತ್ತೆ ಟಿವಿ ಪರದೆಗೆ ಮರಳಿದ್ದಾರೆ. ಇದನ್ನೂ ಓದಿ:ಡಾಲಿ ಟೆಂಪಲ್ ರನ್, ಹುಟ್ಟೂರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ

sindhu rao 1

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅನೇಕ ಕಲಾವಿದರು ಮದುವೆ ಹಾಗೂ ಇನ್ನಿತರ ಕಾರಣಗಳಿಂದ ನಟನೆಯಿಂದ ದೂರ ಉಳಿಯುತ್ತಾರೆ. ವೈಯಕ್ತಿಕ ಸಮಸ್ಯೆಗಳಿಂದಲೋ, ನಟನೆಯ ಮೇಲಿನ ಸೆಳೆತದಿಂದಲೋ ಮತ್ತೆ ಕ್ಯಾಮರಾ ಮುಂದೆ ಬರುತ್ತಾರೆ. ಇದೀಗ ಸಿಂಧು ರಾವ್ ವಿಚಾರದಲ್ಲಿ ಕೂಡಾ ಇದೇ ಆಗಿದೆ. ಡಾ. ವಿಷ್ಣುವರ್ಧನ್(Vishnuvardhan)  ಜೊತೆ ‘ನಾನೆಂದು ನಿಮ್ಮವನೇ’ ಸಿನಿಮಾ ಬಳಿಕ ಸಿಂಧು ರಾವ್, ರಾಯರು ಬಂದರು ಮಾವನ ಮನೆಗೆ, ಮದರ್ ಇಂಡಿಯಾ, ಕಲಾವಿದ, ಆಯುಧ, ಮೌನರಾಗ, ಒಂದಾಗೋಣ ಬಾ, ಪುಟ್ಮಲ್ಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ವರ್ಷ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಕೊನೆಯ ತಂಗಿಯಾಗಿ ನಟಿಸಿದ್ದರು. ಮೌನರಾಗ ಚಿತ್ರದ ನಟನೆಗಾಗಿ ಸಿಂಧುಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ದೊರೆತಿತ್ತು.

ವಿದ್ಯಾಭ್ಯಾಸದತ್ತ ಗಮನ ಹರಿಸಲು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಸಿಂಧು ನಾಯಕಿಯಾಗಿ ಅವಕಾಶಗಳಿಗೆ ಎದುರು ನೋಡಿದರೂ ಅದು ಸಾಧ್ಯವಾಗಲಿಲ್ಲ. ಮತ್ತೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ, ವೈವಾಹಿಕ ಬದುಕಿನ ಜಂಜಾಟದಲ್ಲಿ ಆಕ್ಟಿಂಗ್‌ಗೆ ಗುಡ್ ಬೈ ಹೇಳಿದ್ದರು. ಕೋವಿಡ್ ಸಮಯದಲ್ಲಿ ಅವರು ಗುಬ್ಬಿಮರಿ ಸಿನಿಮಾ, ಸಿಲ್ಲಿ ಲಲ್ಲಿ ಎರಡನೇ ಭಾಗದಲ್ಲಿ ನಟಿಸಿ ಮತ್ತೆ ಮರೆಯಾಗಿದ್ದರು.

ವೈಷ್ಣವಿ ಗೌಡ(Vaishnavi Gowda) , ಗಗನ್ ನಟನೆಯ ‘ಸೀತಾರಾಮ’ (Seetharama) ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಪಾತ್ರದಲ್ಲಿ ಸಿಂಧು ನಟಿಸುತ್ತಿದ್ದಾರೆ. ಸಿಂಧು ಮತ್ತೆ ನಟನೆಗೆ ವಾಪಸಾಗಿದ್ದನ್ನು ನೋಡಿ ಕಿರುತೆರೆಪ್ರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಚೆಲುವೆ ಈಗ ಅಪ್ಪಟ ಗೃಹಿಣಿ. ಇಬ್ಬರು ಗಂಡು ಮಕ್ಕಳಿದ್ಧಾರೆ. ಪತಿ ಮಹೇಶ್, ಸಿಂಧು ನಟನೆಗೆ ಬೆಂಬಲ ನೀಡುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article