ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಬೀಜ ಬಿತ್ತಲಾಗಿದೆ: ಪ್ರಧಾನಿ ಮೋದಿ

Public TV
2 Min Read
pm modi joe biden

– ಅಮೆರಿಕ-ಭಾರತ ಕ್ಲೋಸೆಸ್ಟ್ ನೇಷನ್ಸ್ ಇನ್ ದಿ ವರ್ಲ್ಡ್ ಎಂದ ಬೈಡನ್
– ಜಾಗತಿಕ ಸವಾಲುಗಳನ್ನು ಪರಿಹರಿಸಲು ಯುಎಸ್-ಇಂಡಿಯಾ ಸಂಬಂಧ ಸಹಕಾರಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ವಿಶ್ವ ಮಟ್ಟದ ನಾಯಕರು ಭಾರತ ಹಾಗೂ ಅಮೆರಿಕ ಭಾಂದವ್ಯದ ಬಗ್ಗೆ ಹಾಡಿ ಹೊಗಳಿದ್ದಾರೆ. ಅಲ್ಲದೆ ಹಲವು ಗಂಭೀರ ವಿಚಾರಗಳ ಕುರಿತು ಚರ್ಚೆಯನ್ನು ಸಹ ನಡೆಸಿದ್ದಾರೆ.

ವೈಟ್ ಹೌಸ್‍ನಲ್ಲಿ ಜೋ ಬೈಡನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಇತ್ತೀಚೆಗೆ ನಾವಿಬ್ಬರೂ ಚರ್ಚೆ ನಡೆಸುವ ಅವಕಾಶ ಸಿಕ್ಕಿತ್ತು. ಈ ವಳೆ ಭಾರತ ಹಾಗೂ ಅಮೆರಿಕದ ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಕೋನವನ್ನು ರೂಪಿಸಿದ್ದಿರಿ. ಇಂದು ಇಂಡಿಯಾ-ಯುಎಸ್ ಸಂಬಂಧವನ್ನು ವೃದ್ಧಿಸುವ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಂಡಿದ್ದೀರಿ ಎಂದು ಹೇಳಿದರು. ಇದನ್ನೂ ಓದಿ: ಜೋ ಬೈಡನ್ ಭೇಟಿ ಮಾಡಿದ ಪ್ರಧಾನಿ ಮೋದಿ

ನಿಮ್ಮ ನಾಯಕತ್ವದಲ್ಲಿ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಬೀಜ ಬಿತ್ತಿರುವುದನ್ನು ನಾನು ಕಂಡೆ. ಇಂದಿನ ದ್ವಿಪಕ್ಷೀಯ ಸಭೆ ಮಹತ್ವದ್ದಾಗಿದೆ. ಏಕೆಂದರೆ ನಾವು ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ಭೇಟಿಯಾಗುತ್ತಿದ್ದೇವೆ. ಈ ದಶಕವು ಹೇಗೆ ರೂಪುಗೊಳ್ಳುತ್ತದೆ ಎಂಬುದರಲ್ಲಿ ನಿಮ್ಮ ನಾಯಕತ್ವವು ಖಂಡಿತ ಪಾತ್ರ ವಹಿಸಲಿದೆ. ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಬಲವಾದ ಬೀಜಗಳನ್ನು ಬಿತ್ತಲಾಗಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ

ಯುಎಸ್-ಇಂಡಿಯಾ ಸಂಬಂಧವು ನಮಗೆ ಸಾಕಷ್ಟು ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಹಾಯವಾಗುತ್ತದೆ ಎಂಬುದನ್ನು ದೀರ್ಘ ಕಾಲದಿಂದ ನಂಬಿದ್ದೆ. 2006ರಲ್ಲಿ ನಾನು ಅಮೆರಿಕ ಉಪಾಧ್ಯಕ್ಷನಾಗಿದ್ದಾಗ 2020ರ ವೇಳೆಗೆ ಭಾರತ ಹಾಗೂ ಅಮೆರಿಕ ವಿಶ್ವದ ಆತ್ಮೀಯ ದೇಶಗಳಾಗಿವೆ ಎಂದಿದ್ದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೆನಪಿಸಿಕೊಂಡರು. ಇನ್ನೂ ವಿಶೇಷ ಎಂಬಂತೆ ಜೋ ಬೈಡನ್ ಅಮೆರಿಕದ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

Share This Article
Leave a Comment

Leave a Reply

Your email address will not be published. Required fields are marked *