ಬೆಂಗಳೂರು: ಬಿತ್ತನೆ ಬೀಜದ ಬೆಲೆ ಏರಿಕೆ (Seeds Price Hike) ಖಂಡಿಸಿ ಕೃಷಿ ಸಚಿವ ಮತ್ತು ಸರ್ಕಾರದ ವಿರುದ್ದ ಜೆಡಿಎಸ್ (JDS) ಆಕ್ರೋಶ ಹೊರಹಾಕಿದೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ಕೃಷಿ ಸಚಿವರೇ ಎಲ್ಲಿದಿರಪ್ಪಾ ಎಂದು ಪ್ರಶ್ನಿಸಿದೆ.
ಬಿತ್ತನೆ ಬೀಜದ ದರ 60%ರಷ್ಟು ಹೆಚ್ಚಳವಾಗಿದೆ. ಪಂಚ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡಿದೆ ಎಂದು ಬೀಗುವ ಕಾಂಗ್ರೆಸ್ ಸರ್ಕಾರ ಮಾಡಿರುವ ಘನಕಾರ್ಯ ಇದು. ಒಂದು ಕೈಯ್ಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯ್ಯಲ್ಲಿ ಸುಲಿಗೆ ಮಾಡುತ್ತಿರುವ ಘನಕಾರ್ಯವಿದು. ಕೊಟ್ಟ ಹಾಗೆ ಕೊಟ್ಟು, ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿರುವ ಕಿಡಿಗೇಡಿ ಕೆಲಸ ಇದು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದೆ. ಇದನ್ನೂ ಓದಿ: ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್
Advertisement
Advertisement
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಲಭ್ಯವಿದ್ದ ಬಿತ್ತನೆ ಬೀಜದ ಬೆಲೆ ಏರಿಕೆಯಾದ ಪರಿಣಾಮ, ಮುಕ್ತ ಮಾರುಕಟ್ಟೆಯಲ್ಲಿಯೂ ದರ ದುಪ್ಪಟ್ಟಾಗಿದೆ. ತಕ್ಷಣವೇ ಸರ್ಕಾರ ಬಿತ್ತನೆ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆಗೆ ನಿಯಂತ್ರಣ ವಿಧಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ 5 ವರ್ಷ ಕಳೆದರೂ ನೆರೆಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು – ಸರ್ಕಾರದ ವಿರುದ್ಧ ಆಕ್ರೋಶ