ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದ (Ayodhya Ram Mandir) ಭವ್ಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲು ಸ್ಪರ್ಧೆಯಲ್ಲಿದ್ದ ಮೂರನೇ ರಾಮಲಲ್ಲಾ (Ram Lalla) ವಿಗ್ರಹದ ಫೋಟೋ ಕೂಡ ರಿವೀಲ್ ಆಗಿದೆ. ಶಿಲ್ಪಿ ಗಣೇಶ್ ಭಟ್ (Ganesh Bhatt) ಅವರು ಕಪ್ಪು ಕಲ್ಲಿನಿಂದ ಈ ವಿಗ್ರಹ ಕೆತ್ತಿದ್ದಾರೆ.
ಕರ್ನಾಟಕದ ಮೈಸೂರಿನ ಹೆಚ್.ಡಿ.ಕೋಟೆ ಪ್ರದೇಶದ ಕೃಷಿ ಭೂಮಿಯಲ್ಲಿ ದೊರೆತ ಕಪ್ಪು ಕಲ್ಲಿನಿಂದ ಕೆತ್ತಲಾದ ವಿಗ್ರಹದ ಛಾಯಾಚಿತ್ರಗಳು ವೈರಲ್ ಆಗಿವೆ. ಕೃಷ್ಣ ಶಿಲೆ ಎಂದು ಕರೆಯಲ್ಪಡುವ ಕಲ್ಲಿನಿಂದ ಈ ವಿಗ್ರಹವನ್ನು ಕೆತ್ತಲಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ಬರೋ ಮುನ್ನ ಮೈಸೂರಿನ ಚಿಣ್ಣರ ಮೇಳದಲ್ಲಿ ಸಮಯ ಕಳೆದಿದ್ದೆ- ಶಿಲ್ಪಿ ಅರುಣ್ ಯೋಗಿರಾಜ್ ಬಿಚ್ಚಿಟ್ಟ ಸತ್ಯ
- Advertisement
ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ವಿಗ್ರಹವು ಈಗಾಗಲೇ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿದೆ. ಇತರೆ ಇಬ್ಬರು ಸ್ಪರ್ಧಿಗಳು ದೇವಾಲಯದ ಪವಿತ್ರ ಆವರಣದಲ್ಲಿ ಗೌರವ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅವುಗಳಲ್ಲಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿಸಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇತ್ತು. ಈ ವಿಗ್ರಹಗಳು ದೇವಾಲಯದ ‘ಗರ್ಭಗೃಹ’ದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ರಾಮಮಂದಿರದಲ್ಲಿ ಬೇರೆಡೆ ಪೂಜ್ಯ ಸ್ಥಾನವನ್ನು ಪಡೆಯಲಿವೆ.
- Advertisement
ಬಿಳಿ ಅಮೃತಶಿಲೆಯ ವಿಗ್ರಹ, ಅಮೃತಶಿಲೆಯ ಆಭರಣಗಳು ಮತ್ತು ಬಟ್ಟೆಗಳನ್ನು ಧರಿಸಿದೆ. ರಾಮಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿದ್ದಾನೆ. ಮುಖ್ಯ ಆಕೃತಿಯ ಹಿಂದೆ ವಿಷ್ಣುವಿನ ವಿವಿಧ ಅವತಾರಗಳನ್ನು ಕಮಾನಿನಂತಹ ಭಾಗದಲ್ಲಿ ಕೆತ್ತಲಾಗಿದೆ. ಇದನ್ನೂ ಓದಿ: ಬಾಲಕ ರಾಮನ ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಲಕ್ಷಾಂತರ ಭಕ್ತರು- ದೇಗುಲದಲ್ಲಿ ಹೈ ಸೆಕ್ಯೂರಿಟಿ
ಅಯೋಧ್ಯೆಯ ಭವ್ಯ ಮಂದಿರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.