ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಸಿಡಿ ಕೇಸ್ ಸೇರಿದಂತೆ ಹಲವು ಬ್ಲಾಕ್ಮೇಲ್ ಕೇಸ್ ಸದ್ದು ಮಾಡುತ್ತಿದೆ. ಈ ನಡುವೆ ಇದೀಗ ಮತ್ತೊಂದು ಬ್ಲಾಕ್ಮೇಲ್ ಕೇಸ್ ವರದಿಯಾಗಿದ್ದು, ಸೇಡಂ ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್ಗೆ ಮಹಿಳೆಯೊಬ್ಬರು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.
Advertisement
ಶಾಸಕರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಶಾಸಕರ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ
Advertisement
Advertisement
ಸಿಎಂ ಫೇಸ್ಬುಕ್ ಪೇಜ್ನಲ್ಲಿ ಬಹಿರಂಗವಾಗಿ ಮಹಿಳೆ ಮೆಸೇಜ್ ಮಾಡಿದ್ದರು. ಮಹಿಳೆಯ ಬ್ಲ್ಯಾಕ್ಮೇಲ್ ಬೆದರಿಕೆಯಿಂದ ಎಂಎಲ್ಎ ದೂರು ನೀಡಿದ್ದಾರೆ. ಇತ್ತ ಪ್ರಕರಣ ಸಂಬಂಧ ಮಹಿಳೆಯು ವಕೀಲ ಜಗದೀಶ್ ಜೊತೆ ವಿಧಾನ ಸೌಧ ಪೊಲೀಸ್ ಠಾಣೆಗೆ ತೆರಳಿದ್ದಾರೆ.