ಬೆಂಗಳೂರು: ಅಳಿಯನ ಕೆಪಿಎಸ್‌ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ನ್ಯಾಯ ಕೇಳಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಳಿ ನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಾಣಿಕ್ ಷಾ ಪರೇಡ್(Manekshaw Parade Ground) ಮೈದಾನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಮೂಲದ ಪರಶುರಾಮ್ ವಶಕ್ಕೆ ಪಡೆದ ವ್ಯಕ್ತಿ. ಸಿಎಂ ಸಿದ್ದರಾಮಯ್ಯ ಹಾಗೂ ಗೌವರ್ನರ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತ ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್ ಗರ್ಲ್ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ
Advertisement
Advertisement
ನಡೆದಿದ್ದೇನು..?: ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು. ಆದರೂ ಖಾಕಿ ಕೋಟೆ ಭೇದಿಸಿ ಪರಶುರಾಮ್, ಸಿಎಂ ಬಳಿ ನುಗ್ಗಿದ್ದಾನೆ. ಬಳಿಕ ಸಿಎಂ ಮುಂದೆ ಪ್ಲೇ ಕಾರ್ಡ್ ತೋರಿಸಿ ಆಕ್ರೋಶ ವ್ಯಕ್ತಪಡಿಸಲು ಯತ್ನಿಸಿದ್ದಾನೆ. ವ್ಯಕ್ತಿಯನ್ನು ಗಮನಿಸಿದ ಪೊಲೀಸರು ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ
Advertisement
Advertisement
ಪರಶುರಾಮ್ ಹೇಳಿದ್ದೇನು..?: ಪರಶುರಾಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನನ್ನ ಅಳಿಯ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಅದರ ಪಲಿತಾಂಶ ತಡವಾಗುತ್ತಿದೆ. ಈ ಕಾರಣಕ್ಕೆ ಸಿಎಂ ಬಳಿ ನ್ಯಾಯ ಕೇಳಲು ಬಂದಿರುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ಯಾಕೆ ಬಂದ್ರಿ: ಶೆಟ್ಟರ್‌ಗೆ ಎಂಬಿ ಪಾಟೀಲ್ ಪ್ರಶ್ನೆ
ಕೃತ್ಯ ಇದೇ ಮೊದಲಲ್ಲ: ಪರಶುರಾಮ್ ಇಂತಹ ಕೃತ್ಯ ಎಸಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈತ ಹಲವು ಕಾರ್ಯಕ್ರಮಗಳಲ್ಲಿ ಒಳಗಡೆ ಹೋಗಿ ಪೇಪರ್ ಎಸೆದಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಮೇಲಿಂದ ಮೇಲೆ ಈ ರೀತಿ ಕೃತ್ಯ ಎಸಗಲು ನಿಖರವಾದ ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳುವ ಕೆಲಸವನ್ನು ಸದ್ಯ ಪೊಲೀಸರು ಮಾಡುತ್ತಿದ್ದಾರೆ. ಇದನ್ನೂ ಓದಿ: 75th Republic Day: ಗಮನಸೆಳೆದ ಪ್ರಧಾನಿ ಮೋದಿ ಪೇಟ