ನವದೆಹಲಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ (Ranaji Trophy) ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮತ್ತೆ ಮೂವರು ಅಭಿಮಾನಿಗಳು ಕೊಹ್ಲಿಯತ್ತ ಓಡಿ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley) ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವೆ ನಡೆದ ಮೊದಲ ರಣಜಿ ಪಂದ್ಯದ ಮೂರನೇ ದಿನದಲ್ಲಿ ಕೊಹ್ಲಿ ಭೇಟಿಗಾಗಿ ಮತ್ತೆ ಮೂವರು ಅಭಿಮಾನಿಗಳು ಭದ್ರತೆಯನ್ನು ಉಲ್ಲಂಘಿಸಿದ್ದಾರೆ.ಇದನ್ನೂ ಓದಿ: Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ
Advertisement
Advertisement
ರಣಜಿ ಟ್ರೋಫಿಯ ಮೊದಲ ದಿನ ಪಂದ್ಯದಲ್ಲಿ ಓರ್ವ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನದೊಳಗೆ ಬಂದು ಕೊಹ್ಲಿಗೆ ಕಾಲು ಮುಟ್ಟಿ ನಮಸ್ಕರಿಸಿದ್ದರು. ಇದಾದ ಬಳಿಕ ಇಂದು ಮತ್ತೆ ಅದೇ ಘಟನೆ ಸಂಭವಿಸಿದೆ. ಮೂರನೇ ದಿನದಾಟದ ವೇಳೆ ಮದ್ಯಾಹ್ನದ ಊಟದ ವಿರಾಮಕ್ಕೂ ಮುನ್ನ ಅಂತಿಮ ಓವರ್‌ನಲ್ಲಿ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಮೂವರು ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದುಕೊಂಡು ಹೋದರು.
Advertisement
3 fans invaded together to meet the goat at Arun jaitley stadium. @imVkohli 🐐 pic.twitter.com/ADYmvqffec
— a v i (@973Kohli) February 1, 2025
Advertisement
ದೆಹಲಿಗೆ ಇನ್ನಿಂಗ್ಸ್, 19 ರನ್‌ಗಳ ಭರ್ಜರಿ ಗೆಲುವು:
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ದೆಹಲಿ ತಂಡ ಇನ್ನಿಂಗ್ಸ್ ಮುನ್ನಡೆಯೊಂದಿಗೆ 19 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ರೈಲ್ವೇಸ್ ತಂಡ 67.4 ಓವರ್‌ಗಳಲ್ಲಿ 241 ರನ್ ಗಳಿಸಿತ್ತು. ಆದ್ರೆ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆಡಿದ ದೆಹಲಿ ತಂಡ 106.4 ಓವರ್‌ಗಳಲ್ಲಿ 374 ರನ್ ಪೇರಿಸಿತ್ತು. 133 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡ 30.5 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ದೆಹಲಿ ತಂಡ ಇನ್ನಿಂಗ್ಸ್ ಮುನ್ನಡೆಯೊಂದಿಗೆ 19 ರನ್‌ಗಳ ಗೆಲುವು ಕಂಡಿತು.ಇದನ್ನೂ ಓದಿ: 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರಕ್ಕೆ ಸ್ಫೂರ್ತಿದಾಯಕ ಬಜೆಟ್ – ಪ್ರಹ್ಲಾದ್ ಜೋಶಿ