ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಆವರಣದಲ್ಲಿ ಡ್ರೋನ್ ಹಾರಾಟ ಹಾಗೂ ಲೇಸರ್ ಕಿರಣಗಳ ಚಟುವಟಿಕೆಗಳನ್ನು ನಡೆಸದಂತೆ ದೆಹಲಿ ಪೊಲೀಸರು (Delhi Police) ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ಮುಂದಿನ ಪ್ರಧಾನ ಮಂತ್ರಿಗಳ (Prime Minister) ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ಇರುವುದರಿಂದ ಏರ್‌ಪೋರ್ಟ್‌ನಲ್ಲಿ (Delhi Airport) ವಿವಿಐಪಿ ವಿಮಾನಗಳು ಚಲಿಸಲಿವೆ. ಆದ್ದರಿಂದ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಆದೇಶವು ಜುಲೈ 30ರ ವರೆಗೆ ಜಾರಿಯಲ್ಲಿರುತ್ತದೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ
ಐಜಿಐ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಲೇಸರ್ ಕಿರಣಗಳಿಂದ (Laser Beams) ಪೈಲಟ್‌ಗಳ ದೃಷ್ಟಿ ವಿಚಲಿತಗೊಳ್ಳುವ ಘಟನೆಗಳು ಬೆಳಕಿಗೆ ಬಂದಿವೆ. ವಿಮಾನಗಳ ಲ್ಯಾಂಡಿಂಗ್ ಸಂದರ್ಭದಲ್ಲಿ ಹೀಗೆ ಪೈಲಟ್‌ಗಳ ದೃಷ್ಟಿಯು ವಿಚಲಿತಗೊಳ್ಳವುದರಿಂದ ಸಿಬ್ಬಂದಿ ಹಾಗೂ ವಿಮಾನದ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ
ಅಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತ ಮನೆಗಳು, ಹೋಟೆಲ್ ರೆಸ್ಟೋರೆಂಟ್‌ಗಳು ಇದ್ದು, ಲೇಸರ್ ಹಾಗೂ ಲೈಟಿಂಗ್ಸ್ ಗಳನ್ನು ಬಳಸಲಾಗುತ್ತದೆ. ಇವು ಪೈಲಟ್‌ಗಳು ವಿಮಾನ ಲ್ಯಾಡಿಂಗ್ ಮಾಡುವ ಸಂದರ್ಭದಲ್ಲಿ ದೃಷ್ಟಿ ವಿಚಲನಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಲೇಸರ್ ಕಿರಣಗಳ ಬಳಕೆ ನಿಯಂತ್ರಿಸಲು ಯಾವುದೇ ಪರ್ಯಾಯ ಕ್ರಮಗಳು ಇಲ್ಲದ ಕಾರಣ, ಜೀವಹಾನಿ ಮತ್ತು ವಿಮಾನ ಸುರಕ್ಷತೆಗಳ ಕಾರಣಕ್ಕೆ ಲೇಸರ್ ಚಟುವಟಿಕೆಗಳಿಗೆ ನಿಷೇಧಾಜ್ಞೆ (Section 144) ವಿಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್
ಡ್ರೋನ್ ಹಾರಾಟಕ್ಕೂ ನಿಷೇಧ:
ವಿವಿಐಪಿಗಳ ಓಡಾಟ ಹೆಚ್ಚಾಗಿರುವ ಸಂದರ್ಭಗಳಲ್ಲಿ ಡ್ರೋನ್‌ಗಳು (Drones), ಪ್ಯಾರಾಗ್ಲೈಡರ್ ಹಾಗೂ ಮಾನವ ರಹಿತ ಡ್ರೋನ್‌ಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಮಾಹಿತಿಗಳು ಗುಪ್ತಚರ ಇಲಾಖೆಗೆ ಆಗಾಗ್ಗೆ ಬಂದಿವೆ. ಈ ಕಾರಣಗಳಿಂದ ವಿಮಾನ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಂದ ಡ್ರೋನ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಐಪಿಸಿ ಸೆಕ್ಷನ್ 188 ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಸಿದ್ದಾರೆ.