ಬೆಂಗಳೂರು: ಸ್ಯಾಂಡಲ್‍ವುಡ್ ಅಭಿಮಾನಿಗಳಿಗೆ ಕಡಗದ ಬಗ್ಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಯಾಕೆಂದರೆ ಸ್ಟಾರ್ ನಟರ ಕೈಯಲ್ಲಿ ಕಡಗ ನೋಡಿ, ಅವರನ್ನು ಅನುಸರಿಸುವ ಅಭಿಮಾನಿಗಳು ಸಹ ಕಡಗವನ್ನು ಧರಿಸುತ್ತಾರೆ. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೈಗೆ ಕಡಗ ಹಾಕುತ್ತಿದ್ದರಿಂದ ಅವರ ಅಭಿಮಾನಿಗಳು ಕೂಡ ಅದೇ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ವಿಷ್ಣುದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಯಲ್ಲಿ ಇಂತಹ ಕಡಗ ಕಂಡುಬಂದಿತ್ತು. ಆದರಿಂದ ಡಿ ಬಾಸ್ ಧರಿಸುವ ಕಡಗದ ಬಗ್ಗೆ ಅನೇಕರಿಗೆ ಕೂತೂಹಲವಿತ್ತು.
Advertisement
ಬಾಸ್ ಧರಿಸುವ ಕಡಗದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾತುರ ಅಭಿಮಾನಿಗಳಲ್ಲಿತ್ತು. ಅದು ಯಾರದ್ದು? ಯಾರು ಕೊಟ್ಟಿದ್ದು? ಎಂದು ತಿಳಿಯಬೇಕು ಅಂತ ಅಭಿಮಾನಿಗಳಲ್ಲಿ ಕೂತೂಹಲವಿತ್ತು. ಅದರಲ್ಲೂ ದರ್ಶನ್ ಧರಿಸುವ ಕಡಗ ವಿಷ್ಣುದಾದ ಅವರದ್ದೇ, ಅವರ ನಿಧನದ ಬಳಿಕ ದರ್ಶನ್ ಕೈಗೆ ಬಂದಿದೆ ಅಂತ ಅನೇಕರು ನಂಬಿದ್ದಾರೆ. ದರ್ಶನ್ ಪಾಲಿನ ರಿಯಲ್ ‘ಯಜಮಾನ’ ಇವರೊಬ್ಬರೇ ಅಂತ ಹೇಳುತ್ತಾರೆ. ಅಲ್ಲದೆ ಕಡಗವನ್ನು ದರ್ಶನ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪ್ರೀತಿಯಿಂದ ಕೊಟ್ಟಿರಬಹುದು ಎಂದು ನಂಬಿದವರೂ ಇದ್ದಾರೆ. ಆದ್ರೆ, ದರ್ಶನ್ ಅವರ ಕಡಗದ ಬಗ್ಗೆ ಯಾವುದೇ ನಿಖರ ಮಾಹಿತಿ ಇರಲಿಲ್ಲ.
Advertisement
Advertisement
ಯಜಮಾನ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಕೈಯಲ್ಲಿರುವ ಕಡಗದ ಹಿಂದಿನ ಕಥೆಯನ್ನ ದರ್ಶನ್ ಬಿಚ್ಚಿಟ್ಟಿದ್ದಾರೆ. ಹೌದು, ಕಡಗದ ಕುರಿತು ಹಲವು ಉಹಾಪೋಹಗಳು ಸಿನಿರಂಗದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ದರ್ಶನ್ ಕಡಗದ ರಹಸ್ಯ ಬಿಚ್ಚಿಟ್ಟಿದ್ದಾರೆ. ನಿನ್ನೆ ಮೊನ್ನೆಯಿಂದ ದರ್ಶನ್ ಕಡಗ ಹಾಕುತ್ತಿಲ್ಲ. ಸುಮಾರು 36 ವರ್ಷದಿಂದ ದರ್ಶನ್‍ಗೆ ಕೈಗೆ ಕಡಗ ಹಾಕುವ ಅಭ್ಯಾಸವಿದೆ. ತಾವು ಮೈಸೂರಿನಲ್ಲಿ ನೆಲೆಸಿದ್ದಾಗ, ಪುಟ್ಟ ಬಾಲಕನಿರುವಾಗಿನಿಂದಲೂ ಕೈಗೆ ಕಡಗ ಹಾಕುವುದು ದಾಸ ಅವರಿಗೆ ಅಚ್ಚುಮೆಚ್ಚು.
Advertisement
ಮೈಸೂರಿನಲ್ಲಿ ನಮ್ಮ ಕುಟುಂಬ ನೆಲೆಸಿದ್ದ ಮನೆಯ ಮೇಲಿಯೇ ಪಂಜಾಬಿ ಕುಟುಂಬದವರು ಇದ್ದರು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಆದರಿಂದ ಒಮ್ಮೆ ಗೋಲ್ಡನ್ ಟೆಂಪಲ್‍ಗೆ ಹೋಗಿದ್ದ ವೇಳೆ ಸಣ್ಣದೊಂದು ಕಡಗ ತಂದು ನನಗೆ ಕೊಟ್ಟಿದ್ದರು. ಆಗಿನಿಂದಲೂ ನಾನು ಕಡಗ ಹಾಕುತ್ತಿದ್ದೇನೆ ಅಂತ ಡಿ ಬಾಸ್ ಕಡಗದ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.
ವಿಷ್ಣುವರ್ಧನ್ ಅವರ ಥರ ದರ್ಶನ್‍ಗೂ ಕಡಗ ಅಂದರೇ ನಂಬಿಕೆ, ಪ್ರೀತಿ. ಆದರಿಂದ ಹಿಂದೊಮ್ಮೆ ಕಾರು ಅಪಘಾತವಾಗಿ ತಮ್ಮ ಕೈಗೆ ಬಲವಾದ ಪೆಟ್ಟುಬಿದ್ದಿದ್ದರೂ ಅವರು ಕೈಯಲ್ಲಿದ್ದ ಕಡಗವನ್ನು ತೆಗೆದಿರಲಿಲ್ಲ. ದರ್ಶನ್ ಅವರ ಕೈಯಲ್ಲಿರುವ ಕಡಗದ ಬಗ್ಗೆ ಹರಿದಾಡುತ್ತಿದ್ದ ಅನೇಕ ಊಹಾಪೊಹಗಳಿಗೆ ಸದ್ಯ ಅವರು ಉತ್ತರ ನೀಡಿ ಬ್ರೇಕ್ ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv