70 ವರ್ಷ ಒಂದೇ ಹೇರ್‌ಸ್ಟೈಲ್‌ ಮೆಂಟೇನ್‌ ಮಾಡಿದ್ದರು ಬ್ರಿಟನ್‌ ರಾಣಿ

Public TV
2 Min Read
queen elizabeth hairstyle

ಬ್ರಿಟನ್‌ (Britain) ಇತಿಹಾಸದಲ್ಲೇ ಸುದೀರ್ಘ ಕಾಲದವರೆಗೆ ರಾಣಿಯಾಗಿದ್ದ 2ನೇ ಎಲಿಜಬೆತ್‌ ಈಚೆಗೆ ನಿಧನರಾದರು. ರಾಣಿಯ ಗೌರವಾರ್ಥ ಬ್ರಿಟನ್‌ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಶೋಕಾಚರಣೆ ನಡೆಸಿದವು. ಇಡೀ ಜಗತ್ತು ರಾಣಿ ಎಲಿಜಬೆತ್‌ (Queen Elizabeth 2) ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ಮರಿಸುತ್ತಿದೆ.

ರಾಣಿ 2ನೇ ಎಲಿಜಬೆತ್‌ ಅವರು ರಾಜಮನೆತನದ ಕರ್ತವ್ಯಗಳಿಗೆ ಬದ್ಧರಾಗಿದ್ದವರು. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜಗತ್ತಿನ ಗಮನ ಸೆಳೆದವರು. ಉಡುಗೆ, ಆಭರಣ ಮತ್ತು ಸೌಮ್ಯ ಸ್ವಭಾವದ ನಡವಳಿಕೆ ಮೂಲಕ ಜನತೆಗೆ ಮಾದರಿಯಾಗಿದ್ದವರು. ರಾಣಿಯ ವರ್ಚಸ್ಸಿನ ಜೊತೆಗೆ ತಮ್ಮ ಸೌಂದರ್ಯಕ್ಕೂ ಮಹತ್ವ ನೀಡುತ್ತಿದ್ದರು. ರಾಣಿಯ ಕೇಶವಿನ್ಯಾಸದ (ಹೇರ್‌ಸ್ಟೈಲ್‌) ಗುಟ್ಟು ನಿಜಕ್ಕೂ ಎಂತಹವರನ್ನೂ ಬೆರಗಾಗಿಸುವಂತಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

elizabeth 11

70 ವರ್ಷ ಒಂದೇ ಹೇರ್‌ಸ್ಟೈಲ್‌
ರಾಣಿ 2ನೇ ಎಲಿಜಬೆತ್‌ ತಮ್ಮ ವ್ಯಕ್ತಿತ್ವ ಅಷ್ಟೇ ಅಲ್ಲ, ವಿಶೇಷ ಹೇರ್‌ಸ್ಟೈಲ್‌ ಮೂಲಕವೂ ಗಮನ ಸೆಳೆಯುತ್ತಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಸತತ 70 ವರ್ಷಗಳ ಕಾಲ ಒಂದೇ ರೀತಿಯಲ್ಲಿ ಹೇರ್‌ಸ್ಟೈಲ್‌ ನಿರ್ವಹಿಸಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ಸತ್ಯ.

ಹೇರ್‌ಸ್ಟೈಲ್‌ ಹಿಂದಿನ ಕಥೆಯೇನು?
ರಾಣಿ ತನ್ನ ಕೇಶವಿನ್ಯಾಸಕ್ಕೆ ನಿಷ್ಠರಾಗಿದ್ದರು. ಅದರ ಹಿಂದಿನ ಕಥೆ ಕುತೂಹಲಭರಿತವಾಗಿದೆ. ಬ್ರಿಟಿಷ್‌ ಬ್ಯಾಂಕ್‌ ನೋಟುಗಳು, ಅಂಚೆ ಚೀಟಿಗಳಲ್ಲಿ ರಾಣಿ 2ನೇ ಎಲಿಜಬೆತ್‌ (Queen Elizabeth 2 Hairstyle) ಅವರ ಭಾವಚಿತ್ರ ಮುದ್ರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ನೋಟು, ಅಂಚೆಚೀಟಿಗಳಲ್ಲಿರುವ ಚಿತ್ರ ನೋಡುತ್ತಿದ್ದ ಜನರಿಗೆ ರಾಣಿ ಎಂದೇ ಚಿರಪರಿಚಿತರಂತಿದ್ದರು. ತಾವು ಹೀಗೆಯೇ ಜನರಿಗೆ ಚಿರಪರಿಚಿತರಾಗಿಯೇ ಇರಬೇಕು ಎಂಬ ದೃಷ್ಟಿಯಿಂದ ಅವರು ಒಂದೇ ರೀತಿಯ ಹೇರ್‌ಸ್ಟೈಲ್‌ ಹೊಂದಲು ನಿರ್ಧರಿಸಿದರು. ಸತತ 70 ವರ್ಷ ಅವರು ಅದೇ ಹೇರ್‌ಸ್ಟೈಲ್‌ ಕಾಪಾಡಿಕೊಂಡು ಬಂದರು. ಇದನ್ನೂ ಓದಿ: ಜನರಿಗೆ ಸಿಕ್ರೇಟ್ ಲೆಟರ್- 2085 ರವರೆಗೂ ತೆರೆಯದಿರಲು ರಾಣಿ ಸೂಚನೆ

uk money

ರಾಣಿ ಕೇಶವಿನ್ಯಾಸಕಿ ಯಾರು ಗೊತ್ತಾ?
ರಾಣಿ 2ನೇ ಎಲಿಜಬೆತ್‌ ಅವರ ವಿಶಿಷ್ಟ ಹೇರ್‌ಸ್ಟೈಲ್‌ ಬಗ್ಗೆ ತಿಳಿದವರಿಗೆ, ಸಾಮಾನ್ಯವಾಗಿ ರಾಣಿಯವರ ಕೇಶವಿನ್ಯಾಸಕಿ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಲ್ಯಾನ್ ಕಾರ್ಮೈಕಲ್ ಎಂಬಾಕೆಯೇ ರಾಣಿ ಎಲಿಜಬೆತ್‌ ಅವರ ಕೇಶವಿನ್ಯಾಸಕಿ. ಈಕೆ ಲಂಡನ್‌ನ ಕೋವೆಂಟ್‌ ಗಾರ್ಡನ್‌ನಲ್ಲಿರುವ ಟ್ರೆವರ್ ಸೋರ್ಬಿ ಸಲೂನ್‌ನಲ್ಲಿ ಕೇಶವಿನ್ಯಾಸಕಿಯಾಗಿದ್ದಾರೆ.

ಸಾಂಪ್ರದಾಯಿಕ ಶಾಂಪೂ ಹಾಕ್ತಿದ್ದ ರಾಣಿ
ರಾಣಿ ಅವರು ತಮ್ಮ ತಲೆ ಕೂದಲಿಗೆ ಸಾಂಪ್ರದಾಯಿಕ ಶಾಂಪೂ ಬಳಸುತ್ತಿದ್ದರು ಎಂದು ಕೇಶವಿನ್ಯಾಸಕಿ ಬೆನ್ ಕುಕ್‌‌ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

elizabeth hairstyle

ʼಇಟಾಲಿಯನ್‌ ಬಾಯ್‌ʼ ವಿನ್ಯಾಸ
ತಲೆಗೂದಲು ವಾಶ್‌ ಮಾಡಿದ ನಂತರ, ಚಿಕ್ಕದಾಗಿ ರೋಲ್‌ನಂತೆ ಮಾಡಿ ವಿನ್ಯಾಸಗೊಳಿಸುವುದು. ಇದಕ್ಕೆ ʼಇಟಾಲಿಯನ್‌ ಬಾಯ್‌ʼ (Italian Boy Technique) ಮಾದರಿ ವಿನ್ಯಾಸ ಎನ್ನಲಾಗುತ್ತದೆ. ತಲೆಗೂದಲು ಒಣಗದಂತೆ ನೋಡಿಕೊಂಡು ಮತ್ತೆ ಮತ್ತೆ ಒಂದೇ ಮಾದರಿಯಲ್ಲಿ ರಚಿಸಬೇಕು.

ಕೂದಲು ಬಣ್ಣದಲ್ಲಿ ಮಾತ್ರ ಬದಲಾವಣೆ
ರಾಣಿ ಅವರ ತಲೆಗೂದಲಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಲಾಗುತ್ತಿರಲಿಲ್ಲ. ಅವರ ತಲೆಗೂದಲ ಬಣ್ಣದಲ್ಲಿ ಮಾತ್ರ ಬದಲಾವಣೆಯನ್ನು ಗುರುತಿಸಬಹುದು. ಆರಂಭದಲ್ಲಿ ಕಂದು ಬಣ್ಣ, ನಂತರ ಬೂದು ಬಣ್ಣ. ಕೊನೆಗೆ ಬಿಳಿ ಬಣ್ಣಕ್ಕೆ ಬದಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *