ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಚಾಲಾಕಿ ಚಿರತೆ ಸೆರೆ ಕಾರ್ಯಾಚರಣೆ 23ನೇ ದಿನಕ್ಕೆ ಕಾಲಿಟ್ಟಿದ್ದು 22 ಶಾಲೆಗಳಿಗೆ ಇಂದು ರಜೆ ಮುಂದುವರಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ನಗರದ ಗಾಲ್ಫ್ ಮೈದಾನದಲ್ಲಿರುವ ಚಿರತೆ ಶೋಧಕ್ಕೆ ಇಂದು 300 ಸಿಬ್ಬಂದಿಯಿಂದ ಬೃಹತ್ ಶೋಧಕಾರ್ಯ ನಡೆಸಲಾಗುತ್ತಿದೆ. ಗಜಪಡೆಗಳಿಂದ ನಾಲ್ಕನೇ ದಿನದ ಆಪರೇಷನ್ ಆರಂಭವಾಗಿದೆ. ಶಿವಮೊಗ್ಗದ ಸಕ್ರೆಬೈಲ್ ಬಿಡಾರದಿಂದ ಬಂದಿರುವ ಅರ್ಜುನ, ಆಲೆ ಎಂಬ ತರಬೇತಿ ಪಡೆದ ಎರಡು ಆನೆಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. 300 ಸಿಬ್ಬಂದಿಯಿಂದ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 10ಕ್ಕೂ ಅಧಿಕ ಅರವಳಿಕೆ ತಜ್ಞರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲಿನಿಂದ ಅರ್ಜುನ್, ಆಲೆ ಆಗಮನ
Advertisement
Advertisement
ಚಿರತೆ ಸೆರೆ ವಿಫಲ 22 ಶಾಲೆಗಳ ರಜೆ ಮುಂದುವರಿಕೆ: ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಸೆರೆಯಾದರೂ ಅರಣ್ಯ ಸಿಬ್ಬಂದಿ ಬಲೆಗೆ ಬೀಳುತ್ತಿಲ್ಲ. ಗಾಲ್ಫ್ ಮೈದಾನದ ಒಂದು ಕಿ.ಮೀ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. 22 ಸರ್ಕಾರಿ, ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ರಜೆ ಹಿನ್ನೆಲೆ ಆನ್‍ಲೈನ್‍ನಲ್ಲಿ ಮಕ್ಕಳಿಗೆ ಪಾಠ ಮಾಡಲು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ 22 ಶಾಲೆಗಳ ಪೈಕಿ 11 ಸರ್ಕಾರಿ ಶಾಲೆಗಳ ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್‍ಗಳು ಇಲ್ಲ. ಹೀಗಾಗಿ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವಂತೆ ಸಾರ್ವಜನಿಕರು ಒತ್ತಡ ಹೇರಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಜೊತೆ ವಿದ್ಯಾರ್ಥಿನಿ ರೌಂಡ್ಸ್- ಡಿಸಿ ಆಡಳಿತ ವೈಖರಿ ಪರಿವೀಕ್ಷಣೆ