ರಾಮನಗರ: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆ ಬಂದ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್ ಆಗಿದೆ. ಸದ್ದಿಲ್ಲದೇ ಜಾಲಿವುಡ್ ಸ್ಟುಡಿಯೋ (Jollywood Studio) ಓಪನ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ.
ಡಿ.5ರಂದೇ ಜಾಲಿವುಡ್ ಸ್ಟುಡಿಯೋ ಪುನರಾರಂಭಕ್ಕೆ ಅನುಮತಿ ದೊರಕಿದ್ದು, ಇಂದಿನಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಅ.7ರಂದು ಜಾಲಿವುಡ್ ವಾಟರ್ ಅಡ್ವೆಂಚರ್ & ಸ್ಟುಡಿಯೋಗೆ ರಾಮನಗರ (Ramanagara) ಜಿಲ್ಲಾಡಳಿತ ಬೀಗ ಜಡಿದಿತ್ತು. ಇದನ್ನೂ ಓದಿ: ಬಿಗ್‌ಬಾಸ್‌ಗೆ ರಿಲೀಫ್| ಜಾಲಿವುಡ್ ಸ್ಟುಡಿಯೋಸ್ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್
ಮಾಲಿನ್ಯ ನಿಯಂತ್ರಣ ಮಂಡಳಿಯ (Pollution Control board) ನಿಯಮಗಳನ್ನ ಗಾಳಿಗೆ ತೂರಿ ಜಲಕ್ರೀಡೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನ ನಡೆಸುತ್ತಿದ್ದ ಸ್ಟುಡಿಯೋಗೆ ಹಲವು ಬಾರಿ ನೋಟೀಸ್ ನೀಡಿದ್ರೂ ಉತ್ತರ ನೀಡದ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ಸ್ಟುಡಿಯೋ ಸೀಲ್ ಡೌನ್ ಮಾಡಿತ್ತು. ಎರಡು ದಿನಗಳ ಬಳಿಕ ಸ್ಟುಡಿಯೋ ಒಳಗೆ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಶೂಟಿಂಗ್ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ಮತ್ತೆ ಜಾಲಿವುಡ್ ಸ್ಟುಡಿಯೋ ಸಂಪೂರ್ಣ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯೇ ಅನುಮತಿ ನೀಡಿದೆ.
ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೋರಿದ್ದ ಜಾಲಿವುಡ್ ಸಂಸ್ಥೆ, ಮಂಡಳಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಈ ಬಗ್ಗೆ ಪರಿಶೀಲನೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಇದನ್ನೂ ಓದಿ: ಜಾಲಿವುಡ್ ಸ್ಟುಡಿಯೋಗೆ ಅನುಮತಿ – ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ


