ಬೆಂಗಳೂರು: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ ಆರ್‌ಎಸ್‌ಎಸ್ (RSS) ಆಗಿದೆ. ಆದರೆ ಎಸ್‌ಡಿಪಿಐ (SDPI) ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಎಸ್‌ಡಿಪಿಐಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪಿಎಫ್‌ಐ (PFI) ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನ (Bengaluru) ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆರ್‌ಎಸ್‌ಎಸ್ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಆರ್‌ಎಸ್‌ಎಸ್ ಇನ್ನೂ ಅಧಿಕೃತ ಸಂಘಟನೆ ಆಗಿಲ್ಲ. ಅದರ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇಟ್ಟಿದ್ದಾರೆ. ಆರ್‌ಎಸ್‌ಎಸ್ ನಾಯಕರು ಹಲವಾರು ಆಯುಧ ಇಟ್ಟಿದ್ದಾರೆ. ಬಡವರ ಮಕ್ಕಳ ಕೈಗೆ ಆಯುಧ ಕೊಟ್ಟಿದ್ದಾರೆ. ಎಸ್‌ಡಿಪಿಐ ಒಂದೇ ಒಂದು ದೇಶ ವಿರೋಧಿ ಕೆಲಸ ಮಾಡಿಲ್ಲ. ಆದರೂ ಎನ್‌ಐಎ ಅಧಿಕಾರಿಗಳು ಕಚೇರಿ ಬೀಗ ಒಡೆದು ದಾಳಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ
Advertisement
Advertisement
ಎಸ್‌ಡಿಪಿಐ 98% ಪ್ರಕರಣಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಆರ್‌ಎಸ್‌ಎಸ್ ಬಾಂಬ್ ಸ್ಫೋಟದ ಕೆಲಸ ಮಾಡಿದೆ. ಹಲವು ಪ್ರಕರಣಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಇದ್ದರು. ಆರ್‌ಎಸ್‌ಎಸ್ ಮಲೆಗಾಂವ್ ಸ್ಫೋಟ ಸೇರಿದಂತೆ ಹಲವು ಸ್ಫೋಟ ಮಾಡಿದೆ ಎಂದ ಅವರು, ಎಸ್‌ಡಿಪಿಐ ರಿಜಿಸ್ಟರ್ ಸಂಸ್ಥೆಯಾಗಿದ್ದು, ಆರ್‌ಎಸ್‌ಎಸ್ ಇನ್ನೂ ರಿಜಿಸ್ಟರ್ ಸಂಸ್ಥೆ ಆಗಿಲ್ಲ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧಿಗಳನ್ನು ಹಣಿಯುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಕೂಡ ಸಪೋರ್ಟ್ ಮಾಡುತ್ತಿದೆ. ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ಎಸ್‌ಡಿಪಿಐ ಮನುವಾದಿ ಭಾರತ ತಡೆಯುವ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಮೋದಿ ಹೋದ ಕಡೆಯಲ್ಲಿ ಬಿಜೆಪಿ ಸೋತಿದೆ: ಸಿದ್ದರಾಮಯ್ಯ