InternationalLatestMain Post

ಪಾಕ್ ಸೇನಾ ಹೆಲಿಕಾಪ್ಟರ್ ಪತನ – 6 ಸೈನಿಕರು ದುರ್ಮರಣ

ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಪಡೆಯ ಹೆಲಿಕಾಪ್ಟರ್ (Pakistani Army Helicopter) ಪತನಗೊಂಡು 6 ಮಂದಿ ಸೈನಿಕರು (Commandos) ಮೃತಪಟ್ಟಿರುವ ಘಟನೆ ಹರ್ನೈ ಬಲೂಚಿಸ್ತಾನದ ಖೋಸ್ಟ್ ಬಳಿ ನಡೆದಿದೆ ಎಂದು ವರದಿಯಾಗಿದೆ.

ಹರ್ನೈ (Harnai)  ಬಲೂಚಿಸ್ತಾನದ (Balochistan) ಖೋಸ್ಟ್ (Khost) ಬಳಿ ಸೇನಾ ಕಾರ್ಯಚರಣೆ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್ ಸೇರಿ ಒಟ್ಟು 6 ಸೈನಿಕರು ದುರ್ಮರಣ ಹೊಂದಿದ್ದಾರೆ. ಇದನ್ನೂ ಓದಿ: ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು

6 ಸೈನಿಕರ ಪೈಕಿ ಇಬ್ಬರು ಉನ್ನತ ಶ್ರೇಣಿಯ ಸೇನಾ ಆಧಿಕಾರಿಗಳಾಗಿದ್ದು, ಇನ್ನುಳಿದ ಮೂವರು ಕಮಾಂಡೋಗಳಾಗಿದ್ದರು. ಕಳೆದ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಮಿಲಿಟರಿ ಹೆಲಿಕಾಪ್ಟರ್ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪತನಗೊಂಡಿತು. ಈ ವೇಳೆ ಸಾವನ್ನಪ್ಪಿದ ಆರು ಮಂದಿ ಉನ್ನತ ಶ್ರೇಣಿಯ ಕಮಾಂಡರ್‌ಗಳಾಗಿದ್ದರು. ಪಾಕಿಸ್ತಾನ ಸೇನೆಯ ಏವಿಯೇಷನ್ ಹೆಲಿಕಾಪ್ಟರ್ ಕಳೆದ ತಿಂಗಳು ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದಾಗ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಇದನ್ನೂ ಓದಿ: ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ

Live Tv

Leave a Reply

Your email address will not be published. Required fields are marked *

Back to top button