ಕೋಲ್ಕತ್ತಾ: ವಂದೇ ಭಾರತ್ ರೈಲಿಗೆ (Vande Bharat Train) ಭಾನುವಾರ ಪಶ್ಚಿಮ ಬಂಗಾಳದ (West Bengal) ಬೋಲ್ಪುರ್ ರೈಲು ನಿಲ್ದಾಣದ ಬಳಿ ಕಲ್ಲು ಎಸೆಯಲಾಗಿತ್ತು (Stone Pelting). ಆದರೆ ಇದೀಗ ಈ ಬಗ್ಗೆ ಈಶಾನ್ಯ ಗಡಿ ರೈಲ್ವೇ (NFR) ಸ್ಪಷ್ಟನೆ ನೀಡಿದ್ದು, ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆದಿಲ್ಲ ಇದು ವದಂತಿ ಎಂದು ತಿಳಿಸಿದೆ.
Advertisement
ಭಾನುವಾರ ಪಶ್ಚಿಮ ಬಂಗಾಳದ ಬೋಲ್ಪುರ್ ರೈಲು ನಿಲ್ದಾಣದ ಬಳಿ ವಂದೇ ಭಾರತ್ ರೈಲಿನ ಗಾಜಿಗೆ ಕಲ್ಲು ಎಸೆದು 10 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು. ಈ ಘಟನೆಯ ಬಳಿಕ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಎನ್‍ಎಫ್‍ಆರ್, ಗಾಜಿಗೆ ಕಲ್ಲು ಎಸೆದಿಲ್ಲ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಶಬ್ಧ ಕೇಳಿಸಿದೆ. ಆದರೆ ಗಾಜಿನ ಮೇಲಿರುವ ಬಿರುಕು ಕಲ್ಲು ಬಿದ್ದು ಆಗಿರುವ ಬಿರುಕು ಅಲ್ಲ. ಈ ಬಗ್ಗೆ ಸುಳ್ಳು ವದಂತಿಗಳನ್ನು ಹರಿಬಿಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಮಾನದಲ್ಲಿ ಮದ್ಯ ಸೇವಿಸಿದ್ದ ಇಬ್ಬರು ಪ್ರಯಾಣಿಕರ ಬಂಧನ
Advertisement
Advertisement
ಕಳೆದ ಒಂದು ವಾರದಲ್ಲಿ ಎರಡು ಭಾರಿ ಈ ರೀತಿಯ ಘಟನೆ ಮರುಕಳಿಸಿದ ಬಳಿಕ ಈ ಬಗ್ಗೆ ರೈಲ್ವೇ ಇಲಾಖೆ ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ ಮುಖಂಡರು ಈ ಬಗ್ಗೆ ಎನ್‍ಐಎ ತನಿಖೆ ಆಗಬೇಕು ಎಂದು ಪಟ್ಟುಹಿಡಿದಿದ್ದಾರೆ.
Advertisement
ಡಿಸೆಂಬರ್ 30 ರಂದು ಹೌರಾ ರೈಲು ನಿಲ್ದಾಣದಿಂದ ಪ್ರಾರಂಭಗೊಂಡ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವರ್ಚುವಲ್ ಮೂಲಕ ಫ್ಲ್ಯಾಗ್-ಆಫ್ ಮಾಡಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸೀಸನ್ ಆರಂಭ – ಪೊಲೀಸರು ಸೇರಿ 35ಕ್ಕೂ ಹೆಚ್ಚು ಜನರಿಗೆ ಗಾಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k