-1 ಲೀಟರ್ ಹಾಲಿನ ಬೆಲೆ ಬರೋಬ್ಬರಿ 4 ರೂ. ಏರಿಕೆ
ಬಳ್ಳಾರಿ: ರಾಜ್ಯದಲ್ಲಿ ಹಾಲಿನ ದರ (Milk Price) ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಎಂಎಫ್ (KMF) ಹಾಗೂ ಸರ್ಕಾರ ಧೋರಣೆ ಅನುಸರಿಸಿದೆ. ಪ್ರತೀ ಲೀಟರ್ ಹಾಲಿನ ಮೇಲೆ ಎರಡು ರೂ. ದರ ಏರಿಕೆ ಮಾಡೋದಾಗಿ ಹೇಳಿತ್ತು. ಆದರೆ ಸರ್ಕಾರ, ಕೆಎಂಎಫ್ ಹೇಳಿದ್ದ ದರವೇ ಒಂದು, ಹೆಚ್ಚಳ ಮಾಡಿದ್ದೇ ಮತ್ತೊಂದು ಎನ್ನುವಂತಾಗಿದ್ದು, ಗ್ರಾಹಕರ ಕಣ್ಣು ಕೆಂಪಾಗಿಸಿದೆ. ಒಂದು ಲೀಟರ್ ಹಾಲಿನ ಮೇಲೆ ಬರೋಬ್ಬರಿ ನಾಲ್ಕು ರೂ. ಹೆಚ್ಚಳ ಮಾಡಿ, ಜನರ ಜೇಬಿಗೆ ಕತ್ತರಿ ಹಾಕಿದೆ.
Advertisement
ಪೆಟ್ರೋಲ್ ಬೆಲೆ ಏರಿಕೆಯ ಬಳಿಕ ಇದೀಗ ಸರ್ಕಾರ ಹಾಲಿನ ದರ ಏರಿಕೆ ಮಾಡಿ, ಜನರಿಗೆ ಶಾಕ್ ನೀಡಿದೆ. ಕೆಎಂಎಫ್ ಹಾಗೂ ಸರ್ಕಾರದಿಂದ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಹಾಲಿನ ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಎಂಎಲ್ ಹೆಚ್ಚಿಸಿ, ಎರಡು ರೂ. ಹೆಚ್ಚಳ ಮಾಡುವುದಾಗಿ ಹೇಳಿತ್ತು. ಆದರೆ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಶಾಕ್ ನೀಡಲಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ
Advertisement
Advertisement
ಹಾಲಿನ ದರ ಏರಿಕೆ ವಿಚಾರದಲ್ಲಿ ಕೆಎಂಎಫ್ ಹಾಗೂ ಸರ್ಕಾರ ಸುಳ್ಳು ಹೇಳಿದ್ದು, ನಂದಿನಿ ಶುಭಂ ಗೋಲ್ಡ್ ಹಾಲಿನ ಮೇಲೆ ಲೀಟರ್‌ಗೆ ನಾಲ್ಕು ರೂ. ದರ ಏರಿಕೆ ಮಾಡಿ, ರಾಜ್ಯದ ಜನರಿಗೆ ಮೋಸ ಮಾಡಿರೋದು ಬಟಾಬಯಲಾಗಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ – ಮೋದಿ ತವರಲ್ಲಿ ಇದೆಂಥಾ ಘಟನೆ ಅಂತ ಕಾಂಗ್ರೆಸ್ ತೀವ್ರ ತರಾಟೆ
Advertisement
ಹೌದು. ಶುಭಂ ಗೋಲ್ಡ್ (Shubham Gold) ಅರ್ಧ ಲೀಟರ್ ಪ್ಯಾಕೆಟ್ ಖರೀದಿ ಮಾಡಿದರೆ ಇನ್ನೂ ದುಬಾರಿಯಾಗಲಿದೆ. ಯಾಕೆಂದರೆ ಒಂದು ಲೀಟರ್ ಹಳೇ ದರ 49 ರೂ. ಇದ್ದು, ಹೊಸ ದರ 53 ರೂ. ಆಗಿದೆ. ಅದೇ ನೀವೇನಾದರೂ ಅರ್ಧ ಲೀಟರ್ ಪ್ಯಾಕೆಟ್ ತೆಗೆದುಕೊಂಡರೆ ಹಳೆಯ ದರ 26 ರೂ. ಇದ್ದದ್ದು ಹೊಸ ದರ 29 ರೂ. ಆಗಿದೆ. ಅರ್ಧ ಲೀಟರ್‌ನ ಎರಡು ಪ್ಯಾಕೇಟ್ ಖರೀದಿಸಿದರೆ 6 ರೂ. ಹೆಚ್ಚಾದಂತಾಗುತ್ತದೆ. ಸರ್ಕಾರ ಏಕಾಏಕಿ ದರ ಹೆಚ್ಚಳ ಮಾಡಿ ಜೇಬಿಗೆ ಕತ್ತರಿ ಹಾಕುತ್ತಿದೆ. ಕೂಡಲೇ ಈ ಅನ್ಯಾಯದ ದರ ಹೆಚ್ಚಳ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೈಸೂರು ಮುಡಾದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಸಾವಿರಾರು ಕೋಟಿ ಆಸ್ತಿ ಕಳ್ಳರ ಪಾಲು – ಸಿ.ಟಿ ರವಿ ಆರೋಪ
ಇನ್ನು ಸರ್ಕಾರ ಹಾಗೂ ಕೆಎಮ್‌ಎಫ್ ಹೇಳಿದ್ದೇ ಒಂದು ದರ. ಈಗ ಮಾರಟ ಮಾಡುತ್ತಿರುವುದೇ ಒಂದು ದರ. ಹೀಗಾಗಿ ಸರ್ಕಾರ ಹೇಳುವುದೊಂದು, ಮಾಡಿರುವುದು ಒಂದು ಎಂದು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಂಪರ್ – ಬರೋಬ್ಬರಿ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ
ಫ್ಯಾಟ್ ಕಂಟೆಂಟ್ ಜಾಸ್ತಿ ಇರೋ ಈ ಶುಭಂ ಗೋಲ್ಡ್ ಹಾಲಿಗೆ ಜಾಸ್ತಿ ಬೇಡಿಕೆ ಇರುವುದರಿಂದ ಬೆಲೆ ಜಾಸ್ತಿ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ನಂದಿನಿ ಶುಭಂ ಗೋಲ್ಡ್ ಹಾಲಿನ ದರ ಹೆಚ್ಚಳಕ್ಕೆ ಅಧಿಕಾರಿಗಳು ವಿಚಿತ್ರ ಸಮಜಾಯಿಷಿ ನೀಡುತ್ತಿದ್ದಾರೆ. ಶುಭಂ ಗೋಲ್ಡ್ ಹಾಲಿನಲ್ಲಿ 5% ಫ್ಯಾಟ್, 9% ಎನ್‌ಎಸ್‌ಎಫ್ ಇದೆ. ಯಾವ ಹಸುವಿನಿಂದಲೂ ಈ ಮಾದರಿ ಹಾಲು ಸಿಗೋದಿಲ್ಲ. ಇಷ್ಟು ಫ್ಯಾಟ್ ಹಾಗೂ ಕೆಎಂಎಫ್ ಬರಬೇಕು ಎಂದರೆ ಜೆರ್ಸಿ ಹಸು ಹಾಗೂ ಎಮ್ಮೆಯಿಂದ ಮಾತ್ರ ಸಾಧ್ಯ. ಬಳ್ಳಾರಿ, ರಾಯಚೂರು, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ದೂರದ ರೈತರಿಂದ ನಾವು ಖರೀದಿ ಮಾಡುತ್ತಿದ್ದೇವೆ. ಹೀಗಾಗಿ ಸಾಗಾಣಿಕೆ ವೆಚ್ಚ, ಉತ್ಪಾದನಾ ವೆಚ್ಚಗಳು ಹೆಚ್ಚಾಗುತ್ತಿವೆ. ಹೀಗಾಗಿ ದರ ಹೆಚ್ಚು ಮಾಡಿದ್ದೇವೆ ಎಂದು ರಾಬಕೊವಿ ಹಾಲು ಒಕ್ಕೂಟದ ಎಂಡಿ ಪೀರ್ ನಾಯ್ಕ್ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಶುಭಂ ಗೋಲ್ಡ್ ನಂದಿನಿ ಹಾಲಿನ ದರ 2 ರೂ. ಅಲ್ಲ, ಲೀಟರ್‌ಗೆ 4 ರೂ. ಹೆಚ್ಚಳ!
ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಬದುಕು ಬರ್ಬಾದ್ ಆಗಿದೆ. ಇದೆಲ್ಲದರ ನಡುವೆ ಇದೀಗ ಸರ್ಕಾರ ಹಾಲಿನ ದರ ಏರಿಕೆ ಮಾಡಿ, ಜನರ ಗಾಯದ ಬರೆ ಎಳೆದು, ಜನರ ಜೇಬಿಗೆ ಕತ್ತರಿ ಹಾಕಿದೆ. ಹೀಗಾಗಿ ಕೂಡಲೇ ಕೆಎಂಎಫ್ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಕೂಗು ಕೇಳಿ ಬರುತ್ತಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಿದೆ. ಇದನ್ನೂ ಓದಿ: ಕೋಟಿ ಕುಳವೆಂದು ಯುವಕನ ಅಪಹರಿಸಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಗ್ಯಾಂಗ್!