ಮಾಸ್ಕೋ: ಹವಾಮಾನ ವೈಪರಿತ್ಯದಿಂದಾಗಿ ಪ್ರಾಚೀನ ಪರ್ಮಾಫ್ರಾಸ್ಟ್ (Ancient Permafrost) ಕರಗುವಿಕೆಯು ಮಾನವ ಜಗತ್ತಿಗೆ ಮತ್ತೊಂದು ವೈರಸ್ (Virus) ಭೀತಿ ತಂದೊಡ್ಡಿದೆ. ಸಾವಿರಾರು ವರ್ಷಗಳ ಹಿಂದೆ ಹೂತಿದ್ದ ಮಾರಣಾಂತಿಕ ವೈರಸ್‌ಗೆ ಮರುಜನ್ಮ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
Advertisement
ಹೌದು, ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್‌ಗಳಿಗೆ ಈಗ ಮರುಜನ್ಮ ನೀಡಲಾಗಿದೆ. ‘ಜೊಂಬಿ ವೈರಸ್’ (Zombie Virus) ಹೆಸರಿನ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ (Russia) ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವು ಹೆಪ್ಪುಗಟ್ಟಿದ ನೆಲದಲ್ಲಿ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ ಎನ್ನಲಾಗಿದೆ. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ
Advertisement
Advertisement
ವಾತಾವರಣದ ತಾಪಮಾನ ಏರಿಕೆಯಿಂದಾಗಿ ಪರ್ಮಾಫ್ರಾಸ್ಟ್ (ಮಂಜುಗಡ್ಡೆಯ ಮೇಲಿನ ಪದರ) ಕರಗುವಿಕೆಯು ಈ ಹಿಂದೆ ಸಿಕ್ಕಿಬಿದ್ದಿರುವ ಮಿಥೇನ್‌ನಂತಹ ಹಸಿರುಮನೆ ಅನಿಲಗಳನ್ನು ಮುಕ್ತಗೊಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ವೈರಸ್ ದೀರ್ಘಕಾಲದ ವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಇವು ಹೊರಾಂಗಣ ಪರಿಸ್ಥಿತಿಗೆ ಹೊಂದಿಕೊಂಡರೆ ನಂತರದಲ್ಲಿ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಅಪಾಯ ಬೀರುತ್ತದೆ ಅನ್ನೋದನ್ನ ಅಂದಾಜು ಮಾಡಲು ಸಾಧ್ಯವಿಲ್ಲ. ಈ ವೈರಸ್, ಮನುಷ್ಯ ಹಾಗೂ ಪ್ರಾಣಿಗಳಿಗೂ ತಗುಲುವಂತಹದ್ದಾಗಿದ್ದು, ಹೆಚ್ಚು ಸಮಸ್ಯಾತ್ಮಕವಾಗಲಿದೆ ಎಂದು ವಿಜ್ಞಾನಿಗಳು (Scientists) ಎಚ್ಚರಿಸಿದ್ದಾರೆ.
Advertisement
ಜೊಂಬಿ ವೈರಸ್ ಕುರಿತು ಈಗಾಗಲೇ ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆ ಕಂಡಿವೆ. ಇತ್ತೀಚೆಗೆ ಬಿಡುಗಡೆಯಾದ ತಮಿಳು ನಟ ಜಯಂ ರವಿ ಅಭಿನಯದ `ಮಿರುತನ್’ ಸಿನಿಮಾದಲ್ಲೂ (Cinema) ಜೊಂಬಿ ವೈರಸ್ ಕುರಿತು ಜಾಗೃತಿ ಮೂಡಿಸಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್