ನವದೆಹಲಿ: 2024ರ ಮಾರ್ಚ್ ವೇಳೆಗೆ ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ (Air India) ವಿಸ್ತಾರಾ ಏರ್‌ಲೈನ್ಸ್ (Vistara Airlines) ಅನ್ನು ವಿಲೀನಗೊಳಿಸುವುದಾಗಿ ಟಾಟಾ ಸಮೂಹ (TaTa Groups) ಅಧಿಕೃತವಾಗಿ ಘೋಷಿಸಿದೆ.
Tata Group announces the consolidation of its airlines, Vistara and Air India by March 2024. pic.twitter.com/40QW2pBFzQ
— ANI (@ANI) November 29, 2022
Advertisement
ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೌಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗಾಪುರ ಏರ್‌ಲೈನ್ಸ್ (Singapore Airlines) ಕಳೆದ ಅಕ್ಟೋಬರ್‌ನಲ್ಲೇ ತಿಳಿಸಿತ್ತು. ಇದನ್ನೂ ಓದಿ: ಸ್ಯಾಟಲೈಟ್ ಫೋನ್ ಸಾಗಿಸ್ತಿದ್ದ ರಷ್ಯಾದ ಮಾಜಿ ಸಚಿವ ಭಾರತದ ವಿಮಾನ ನಿಲ್ದಾಣದಲ್ಲಿ ಬಂಧನ
Advertisement
Advertisement
ಪ್ರಸ್ತುತ ವಿಸ್ತಾರಾದಲ್ಲಿ (Vistara Airlines) ಟಾಟಾ ಸಮೂಹವು ಶೇ.51ರಷ್ಟು ಪಾಲು ಹೊಂದಿದೆ. ಉಳಿದ ಶೇ.49 ಷೇರು ಸಿಂಗಾಪುರ ಏರ್‌ಲೈನ್ಸ್‌ನಲ್ಲೇ ಇದೆ. ಇದೀಗ ವಹಿವಾಟಿನ ಭಾಗವಾಗಿ ಎಸ್‌ಐಎ, ಏರ್ ಇಂಡಿಯಾದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ – ಪತಿಯನ್ನು ಹತ್ಯೆ ಮಾಡಿದ್ದು ಯಾಕೆ?
Advertisement
ಈಗಾಗಲೇ ಏರ್ ಇಂಡಿಯಾದ ಪೂರ್ಣ ಮಾಲೀಕತ್ವ ಹೊಂದಿರುವ ಟಾಟಾ ಸಮೂಹ, ಏರ್‌ಏಷ್ಯಾ ಇಂಡಿಯಾ (AirAsia India) ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರಿ ಹೂಡಿಕೆಯ ಭಾಗವಾಗಿ ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಖರೀದಿಸಿತು.
ಸದ್ಯ 2024ರ ಮಾರ್ಚ್ ತಿಂಗಳೊಳಗೆ ವಿಲೀನಗೊಳಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.