ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
Advertisement
ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು
Advertisement
Advertisement
ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.
Advertisement
ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ
ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.
ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.