ಹೈದರಾಬಾದ್: ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಹಾಲುಣಿಸುತ್ತಿರುವಾಗಲೇ ತಾಯಿಯೊಬ್ಬಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟ್ ಮಂಡಲದ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.
Advertisement
25 ವರ್ಷದ ಜಯಶ್ರೀ ತನ್ನ ಮೊದಲ ಹೆರಿಗೆಗೆ ತವರು ಮನೆಗೆ ಬಂದಿದ್ದರು. 2 ತಿಂಗಳ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಪತಿ ಪ್ರಶಾಂತ್ ತಿರ್ಮಲಾಪುರದಿಂದ ಬಂದು ಆಕೆಯ ಮೈಬಣ್ಣ ಬದಲಾಗಿ ಕಪ್ಪಾಗಿದ್ದರಿಂದ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೃದಯ ಕವಾಟದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದು, ಔಷಧ ಬಳಸಿದರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಸೇವಿಸಿ ಮತ್ತೆ ನೇರಳಪಲ್ಲಿಗೆ ಮರಳಿದ್ದರು. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿರಂತರ ಪ್ರಯತ್ನ ಮಾಡುತ್ತೇವೆ: ಕಾಗೇರಿ ಹಾರಿಕೆ ಉತ್ತರ
Advertisement
Advertisement
ನಿನ್ನೆ ಬೆಳಗ್ಗಿನ ಜಾವ 5.30ಕ್ಕೆ ಮಗುವಿಗೆ ಹಾಲುಣಿಸುವ ವೇಳೆ ಜಯಶ್ರೀ ಕೊನೆಯುಸಿರೆಳೆದಿದ್ದಾರೆ. ಸ್ವಲ್ಪ ಸಮಯದ ನಂತರ ಅಜ್ಜ ಮತ್ತು ಅಜ್ಜಿ ಚಹಾಕ್ಕೆ ಕರೆದರು. ಆದರೆ ಅವರ ಕೋಣೆಯಿಂದ ಉತ್ತರ ಬರಲಿಲ್ಲ. ಏನಾಯಿತು ಎಂದು ನೋಡಲು ಹೋದಾಗ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.