ಮಂಗಳೂರು| ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸಾವು

Public TV
1 Min Read
mangaluru protest

ಮಂಗಳೂರು: ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರವೊಂದು ಬಿದ್ದು ಸವಾರ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೋಡಿಂಬಾಳ ಸಮೀಪದ ಪುಳಿಕುಕ್ಕುವಿನಲ್ಲಿ ನಡೆದಿದೆ.

ಸ್ಥಳೀಯ ಪಿಗ್ಮಿಕಲೆಕ್ಟರ್ ಸೀತಾರಾಮ ಸಾವನ್ನಪ್ಪಿದ ಬೈಕ್ ಸವಾರ. ಕಡಬದಿಂದ ಮನೆಗೆ ಬರುತ್ತಿರುವಾಗ ಏಕಾಏಕಿ ಸ್ಕೂಟರ್ ಮೇಲೆ ಮರ ಬಿದ್ದು ಗಂಭೀರ ಗಾಯಗೊಂಡ ಸೀತಾರಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದ ಮರ ಬೀಳುವ ಹಂತದಲ್ಲಿದ್ದು, ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಮರ ಬಿದ್ದು ಸ್ಕೂಟಿ ಸವಾರ ಸಾವು ಹಿನ್ನೆಲೆ ಕಡಬ-ಪಂಜ ರಸ್ತೆ ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮರ ತೆರವಿಗೆ ಅರಣ್ಯ ಅಧಿಕಾರಿಗಳು ಒಂದು ವಾರದ ಗಡುವು ಕೇಳಿದರು. ಪ್ರತಿಭಟನೆ ಸಾರ್ವಜನಿಕರು ಹಿಂತೆಗೆದುಕೊಂಡರು.

TAGGED:
Share This Article