ಹಾಸನ: ಮದುವೆಗೆ ಒಪ್ಪದ ಖಾಸಗಿ ಶಾಲೆಯ ಶಿಕ್ಷಕಿಯನ್ನು (Teacher) ಅಪಹರಿಸಿದ್ದ ಆರೋಪಿಯನ್ನು ಅಪಹರಣ ನಡೆದ ಏಳೇ ಗಂಟೆಯಲ್ಲಿ ಪೊಲೀಸರು (Police) ಬಂಧಿಸಿದ್ದು, ಶಿಕ್ಷಕಿಯನ್ನು ರಕ್ಷಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಮು ಎಂದು ಗುರುತಿಸಲಾಗಿದೆ. ಆರೋಪಿ ಬಿಟ್ಟಗೌಡನಹಳ್ಳಿ ಬಳಿ ಶಾಲೆಗೆ ಹೊರಟು ನಿಂತಿದ್ದ ಶಿಕ್ಷಕಿಯನ್ನು ಅಹರಣ ಮಾಡಿದ್ದ. ಅತ್ತೆ ಮಗಳೇ ಆದ ಶಿಕ್ಷಕಿಯನ್ನು ಕಾರಿನಲ್ಲೇ ಮದುವೆಯಾಗಲು ಯತ್ನಿಸಿದ್ದಾನೆ. ಆಕೆ ಒಪ್ಪದಿದ್ದಾಗ ಅಪಹರಿಸಿಕೊಂಡು ಹೋಗಿದ್ದ. ಪೊಲೀಸರು ಸಹ ಕಾರನ್ನು ಬೆನ್ನಟ್ಟಿದ್ದರು. ಆರೋಪಿ ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಪ್ರೀತಿಯ ನಾಟಕವಾಡಿ ಯುವತಿಯರಿಗೆ ವಂಚನೆ- ಚಿತ್ರಹಿಂಸೆ ನೀಡುವ ವೀಡಿಯೋ ವೈರಲ್
ಪೊಲೀಸರು ಆರೋಪಿಯ ಕಾರನ್ನು ಬೆನ್ನಟ್ಟುತ್ತಿದ್ದಂತೆ, ರಾಮು ಒಬ್ಬನನ್ನೇ ಬಿಟ್ಟು ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹಾಸನ (Hassan) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಕಾರ್ಯಕ್ಕೆ ಯುವತಿಯ ಕುಟುಂಬಸ್ಥರು ಹಾಗೂ ನಗರದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗ್ಗೆ ಶಾಲೆಗೆ ಹೊರಟು ನಿಂತಿದ್ದ ಶಿಕ್ಷಕಿಯನ್ನು ಅಪಹರಣ ಮಾಡಲಾಗಿತ್ತು. ಇದು ಭಾರೀ ಸುದ್ದಿಯಾಗಿದ್ದು, ಪೊಲೀಸರು ತಂಡಗಳನ್ನು ರಚಿಸಿದ್ದರು. ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲೂ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿದೆ: ಪೊಲೀಸ್ ಆಯುಕ್ತರು