Connect with us

ಬೇಲೂರಿನಲ್ಲಿ ಟ್ಯೂಶನ್ ಗೆಂದು ಹೇಳಿ ಶಾಲೆಯ ಹಿಂಭಾಗದಲ್ಲಿಯೇ ಲವ್ವಿ-ಡವ್ವಿ!

ಬೇಲೂರಿನಲ್ಲಿ ಟ್ಯೂಶನ್ ಗೆಂದು ಹೇಳಿ ಶಾಲೆಯ ಹಿಂಭಾಗದಲ್ಲಿಯೇ ಲವ್ವಿ-ಡವ್ವಿ!

ಹಾಸನ: ಶಾಲೆಗೆ ಹೋಗುವ ಅಪ್ರಾಪ್ತ ವಿದ್ಯಾರ್ಥಿಗಳು ಅಸಹ್ಯಕರವಾಗಿ ವರ್ತಿಸುತ್ತಿರುವ ವಿಲಕ್ಷಣ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.

ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ರೀತಿಯ ಘಟನೆ ನಡೆದಿದ್ದು, ಮುಂಜಾನೆಯೇ ಶಾಲೆಗೆ ಬರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ಅಸಭ್ಯ ವರ್ತನೆಯ ವಿಡಿಯೋ ಈಗ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಇದರಿಂದ ಪೋಷಕರು ಮತ್ತು ಶಿಕ್ಷಕರಿಗೆ ಮುಜುಗುರ ಉಂಟಾಗಿದೆ.

ಮುಂಜಾನೆ ಟ್ಯೂಶನ್ ಗೆಂದು ಬಂದು ಈ ರೀತಿ ಅಸಭ್ಯವಾಗಿ ಲವ್ವಿ-ಡವ್ವಿ ಆಟ ಶುರುಮಾಡಿಕೊಂಡು ಪೋಷಕರ ನಂಬಿಕೆಗೆ ಮೋಸ ಮಾಡುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬೇಲೂರು ಹೊರವಲಯದಲ್ಲಿರುವ ಈ ಶಾಲೆ ಹಿಂಭಾಗ ಸ್ವೇಚ್ಛಾಚಾರದ ವರ್ತನೆ ನಡೆಯುತ್ತಿದೆ. ನೆರೆ ಹೊರೆಯವರಿಗೆ ಕ್ಯಾರೇ ಎನ್ನದೇ ಮೈಮರೆತ ಪಡ್ಡೆ ಹುಡುಗ ಹುಡುಗಿಯರು ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

Advertisement
Advertisement