ಬಳ್ಳಾರಿ: ಶಾಲಾ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಿದ್ದಾಳೆ.
ತನುಶ್ರೀ ಬಳ್ಳಾರಿಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಹಿನ್ನೆಲೆಯಲ್ಲಿ ತನುಶ್ರೀ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡುವುದನ್ನು ನಿಲ್ಲಿಸಿದ್ದಾಳೆ. ಆ ಹಣವನ್ನು ಆಕೆ ಸಿಆರ್‌ಪಿಎಫ್ ಯೋಧರ ನೆರವಿಗೆ ನೀಡಿದ್ದಾಳೆ.
ತನುಶ್ರೀ ತನ್ನ ಹುಟ್ಟುಹಬ್ಬದ ಆಚರಣೆಗೆ ಖರ್ಚಾಗುವ ಹಣವನ್ನು ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ನೀಡಲು ಮುಂದಾಗಿದ್ದಳು. ಬೆಳ್ಳಂ ಬೆಳಗ್ಗೆ ತನುಶ್ರೀ ತನ್ನ ಪೋಷಕರೊಂದಿಗೆ ಬಂದು ಬಳ್ಳಾರಿ ಡಿಸಿ ಮೂಲಕ ಸಿಆರ್‌ಪಿಎಫ್ ಯೋಧರ ಕಲ್ಯಾಣ ನಿಧಿಗೆ ಡಿಡಿ ಮೂಲಕ ಹಣ ಪಾವತಿಸಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv