ಅಕ್ಷರಾಭ್ಯಾಸ ಮಾಡಿದ ಗುರುಕುಲಕ್ಕೆ ವಿಶೇಷ ಅತಿಥಿಯಾಗಿ ಹೋಗಬೇಕು ಎಂಬುದು ಎಷ್ಟೋ ಜನರ ಕನಸಾಗಿರುತ್ತೆ. ಆದರೆ, ತಾವು ವಿದ್ಯಾಭ್ಯಾಸ ಮಾಡಿದ ಶಾಲಾ-ಕಾಲೇಜುಗಳ ಸಮಾರಂಭದಲ್ಲಿ ಚೀಫ್ ಗೆಸ್ಟ್ ಆಗಿ ಪಾಲ್ಗೊಳ್ಳುವ ಅವಕಾಶ ಎಲ್ಲರಿಗೂ ಸಿಕ್ಕೋದಿಲ್ಲ. ಅಷ್ಟಕ್ಕೂ, ಹೀಗ್ಯಾಕೆ ಈ ಸುದ್ದಿ ಅಂದರೆ ಸ್ಕೂಲ್ ಪುಟ್ಟಿ ಖ್ಯಾತಿಯ ನಟಿ ಅರ್ಚನಾ ಕೊಟ್ಟಿಗೆ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಸ್ಪೆಷಲ್ ಗೆಸ್ಟ್ ಆಗಿ ಹೋಗಿಬಂದಿದ್ದಾರೆ. ಓದು-ಬರಹ ಕಲಿಸಿ ವಿದ್ಯಾವಂತರನ್ನಾಗಿ ಮಾಡಿದ ಶಾಲಾ ಸಮಾರಂಭದಲ್ಲಿ ಭಾಗಿಯಾದ ಖುಷಿಯಲ್ಲಿ ನಮ್ಮೊಟ್ಟಿಗೆ ಮಾತನಾಡಿದ್ದಾರೆ.
Advertisement
ಇದೇ ತಿಂಗಳ ಮೂರನೇ ತಾರೀಕಿನಂದು ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿದೆ. ಅದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರ್ಚನಾ ಪಾಲಿಗೆ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ, ಕನ್ನಡದ ಹಬ್ಬದಲ್ಲಿ ಭಾಗಿಯಾದ ಖುಷಿ ಸಿಕ್ಕಿದೆ. ಯಾಕೆಂದರೆ, ಅದು ಮಾಮೂಲಿ ಕಾರ್ಯಕ್ರಮವಾಗಿರಲಿಲ್ಲ. ನಾಡು ನುಡಿಗಳಿಗೆ ಗೌರವ ಸಮರ್ಪಿಸುವ, ಕುವೆಂಪು, ಡಾ. ರಾಜ್ ಕುಮಾರ್ ರಂಥಾ ಕನ್ನಡದ ಅಸ್ಮಿತೆಯನ್ನು ಸ್ಮರಿಸುವ, ಜಾನಪದ ಕಲೆಯೂ ಸೇರಿದಂತೆ ಈ ನೆಲದ ಅಷ್ಟೂ ಸಂಸ್ಕತಿಗಳ ಕನ್ನಡಿಯಂತಿದ್ದ ಚೆಂದದ ಸಮಾರಂಭವಾಗಿತ್ತೆಂಬ ಧನ್ಯತೆ ಅರ್ಚನಾರಲ್ಲಿದೆ.
Advertisement
Advertisement
ಕ್ರೈಸ್ಟ್ ಶಾಲೆಯ ಕನ್ನಡ ರಾಜ್ಯೋತ್ಸವಕ್ಕೆ ತಯಾರಿ ನಡೆಯುವಾಗ ಮುಖ್ಯ ಅತಿಥಿಯಾಗಿ ಯಾರನ್ನು ಕರೆಯೋದೆಂಬ ಬಗ್ಗೆ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯವರೊಬ್ಬರು ತಮ್ಮಲ್ಲಿಯೇ ಓದಿ ಪ್ರಸಿದ್ಧಿ ಪಡೆದುಕೊಂಡಿರುವ ಅರ್ಚನಾ ಕೊಟ್ಟಿಗೆ ಹೆಸರನ್ನು ಸೂಚಿಸಿದ್ದರಂತೆ. ನಂತರ ಫಾದರ್ ಕೂಡಾ ಅದಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಕಡೆಗೂ ಕ್ರೈಸ್ಟ್ ಯೂನಿವರ್ಸಿಟಿ ಕಡೆಯಿಂದ ಕರೆ ಬಂದಾಗ ಅರ್ಚನಾ ಥ್ರಿಲ್ ಆಗಿ ಒಪ್ಪಿಕೊಂಡಿದ್ದರಂತೆ. ಈ ಬಗ್ಗೆ ಖುಷಿಖುಷಿಯಾಗಿ ಮಾತನಾಡಿದ ಅರ್ಚನಾ, 2015-18ನೇ ಸಾಲಿನಲ್ಲಿ ಕೋರಮಂಗಲ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪದವಿ ವ್ಯಾಸಂಗ ಮಾಡಿದ್ದೆ. ಆ ಕಾಲದಲ್ಲಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲೊಂದು ಸೀಟು ಸಿಕ್ಕಿದರೆ ಸಾಕೆಂಬ ಮನಃಸ್ಥಿತಿ ನನ್ನಲ್ಲಿತ್ತು, ಆದ್ರೀಗ, ಅದೇ ಕಾಲೇಜಿಗೆ ಅತಿಥಿಯಾಗಿ ಹೋಗಿಬಂದಿದ್ದು ತೃಪ್ತಿಕೊಟ್ಟಿದೆ ಎನ್ನುತ್ತಾರೆ.
Advertisement
ಸ್ಯಾಂಡಲ್‍ವುಡ್‍ನ ಪ್ರತಿಭಾನ್ವಿತ ನಟಿಮಣಿಯರ ಪೈಕಿ ನಟಿ ಅರ್ಚನಾ ಕೊಟ್ಟಿಗೆ ಕೂಡ ಒಬ್ಬರು. ಸಿನಿಮಾ ಕುಟುಂಬದ ಹಿನ್ನಲೆ ಇಲ್ಲದೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರಾದರೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅತೀ ಕಡಿಮೆ ಸಮಯದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. `ಅರಣ್ಯಕಾಂಡ’ ಹೆಸರಿನ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡ ಈಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಬೇರೆಯವರ ಥರ ಒಂದೋ, ಎರಡೋ ಚಿತ್ರಕ್ಕೆ ಸ್ಟಾರ್ ಹೀರೋಯಿನ್ ಆಗುವಂತಹ ಚಾನ್ಸ್ ಸಿಗದೇ ಇರಬಹುದು ಆದರೆ ಭರಪೂರ ಅವಕಾಶಗಳಂತೂ ಈಕೆಯನ್ನೂ ಅರಸಿಕೊಂಡು ಬಂದಿವೆ. ಯೆಲ್ಲೋ ಗ್ಯಾಂಗ್ಸ್, ಮೇಡ್ ಇನ್ ಬೆಂಗಳೂರು, ಡಿಯರ್ ಸತ್ಯ, ಕಟ್ಟಿಂಗ್ ಶಾಪ್, ಹೊಂದಿಸಿ ಬರೆಯಿರಿ, ವಿಜಯಾನಂದ, ತ್ರಿಬಲ್ ರೈಡಿಂಗ್, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಿಂಚು ಹರಿಸಿದ್ದಾರೆ.
ಅಂದ್ಹಾಗೇ, ಕಳೆದ ಐದು ವರ್ಷಗಳಿಂದ ನಟಿ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ್ಮೇಲೊಂದರಂತೆ ಸಿನಿಮಾಗಳನ್ನೂ ಮಾಡ್ತಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದ ನೇಮು, ಫೇಮು ಮಾತ್ರ ಸಿಕ್ಕಿಲ್ಲ. ಡಿಮ್ಯಾಂಡಿಂಗ್ ನಟಿಯಾಗಿ ಮಿಂಚುವ ಅದೃಷ್ಟ ಈಕೆಗಿನ್ನೂ ಒದಗಿಬಂದಿಲ್ಲ. ಅದಕ್ಕೇನು ಬೇಜಾರಿಲ್ಲ ಎನ್ನುವ ಈ ನಟಿ, ಹೊಂದಿಸಿ ಬರೆಯಿರಿ ಸಿನಿಮಾ ನೋಡಿವರು ನನ್ನ `ಸೀನಿಯರ್ ಬಾನು’ ಪಾತ್ರದಿಂದ ಗುರ್ತಿಸ್ತಾರೆ. `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ನೋಡಿದವರು ಸ್ಕೂಲ್ ಪುಟ್ಟಿ, ಚಿನ್ನಿ ಅಂತ ಕೂಗ್ತಾರೆ ಸದ್ಯಕ್ಕೆ ಇಷ್ಟು ಸಾಕು ಅಂತಾರೇ. ಅಷ್ಟಕ್ಕೂ, ನಂಗೆ ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿ ಕುಳಿತುಕೊಳ್ಳಬೇಕೆನ್ನುವ ಆಸೆಯೇನೂ ಇಲ್ಲ. ಜನ ನನ್ನನ್ನ ಅದ್ಭುತ ನಟಿ ಅಂತ ಒಪ್ಪಿಕೊಂಡರೆ ಅಷ್ಟೇ ಸಾಕೆನ್ನುವ ಅರ್ಚನಾ ಕೊಟ್ಟಿಗೆ ಬಹುಭಾಷಾ ನಟಿ ಊರ್ವಶಿಯಂತೆ ಅಭಿನಯಿಸೋದನ್ನ ಕಲಿಬೇಕು. `ರಾಮ ಶ್ಯಾಮ ಭಾಮ’ ದಲ್ಲಿ ಊರ್ವಶಿಯವರಿಗೆ ಸಿಕ್ಕಂತಹ ಪಾತ್ರ ನಂಗೂ ಸಿಗಬೇಕು. ಆ ತರಹ ಕ್ಯಾರೆಕ್ಟರ್ ಯಾರಾದ್ರೂ ಡೈರೆಕ್ಟರ್ ನನಗಾಗಿ ಸೃಷ್ಟಿ ಮಾಡಿದರೆ ಕಣ್ಣಿಗೆ ಹೊತ್ಕೊಂಡು ಆ್ಯಕ್ಟ್ ಮಾಡ್ತೀನಿ ಅಂತಾರೇ.