ಜೈಪುರ: ಜಲಾವೃತವಾದ ಅಂಡರ್ ಪಾಸಿನಲ್ಲಿ ಸ್ಕೂಲ್ ಬಸ್ ಸಿಲುಕಿದ್ದು, ಅದರಲ್ಲಿದ್ದ 50 ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ದೌಸಾ ಜಿಲ್ಲೆಯ ಲಾಲ್‍ಸೆಟ್ ನಲ್ಲಿ ಈ ಭೀಕರ ದುರಂತ ನಡೆದಿದೆ. ಮಳೆಯಿಂದಾಗಿ ಜಲಾವೃತವಾದ ಅಂಡರ್ ಪಾಸಿನಲ್ಲಿ ಬಸ್ ಸಿಲುಕಿಕೊಂಡಿದೆ. ಈ ವೇಳೆ ನೀರು ಬಸ್ ಒಳಗೆ ನುಗ್ಗಲು ಪ್ರಾರಂಭಿಸಿದ್ದು, ಸ್ವಲ್ಪ ಎಡವಿದರೂ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆದರೆ ತಕ್ಷಣ ಎಚ್ಚೆತ್ತುಕೊಂಡ ಬಸ್ಸಿನೊಳಗಿದ್ದ ಮಕ್ಕಳು ಒಬ್ಬೊಬ್ಬರೇ ಬಸ್ಸಿನ ಟಾಪ್ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಟಾಪ್ ಮೇಲಿದ್ದ 50 ಕ್ಕೂ ಹೆಚ್ಚು ಮಕ್ಕಳನ್ನು ಸ್ಥಳೀಯರು ಕರೆದುಕೊಂಡು ಹೋಗುವ ಮೂಲಕ ರಕ್ಷಿಸಿದ್ದಾರೆ.
Advertisement
ಅಷ್ಟೇ ಅಲ್ಲದೇ ಮಕ್ಕಳನ್ನು ಸ್ಥಳೀಯರೇ ಈಜುಕೊಂಡು ಹೋಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
#WATCH: School kids being rescued after their school bus got stuck in a waterlogged underpass in Rajasthan's Dausa. pic.twitter.com/Na79iWvkia
— ANI (@ANI) August 23, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv