– ಕ್ಷಮೆ ಕೇಳಿದ ಪ್ರಿನ್ಸಿಪಾಲ್
ಮುಂಬೈ: ಶಾಲೆಯಲ್ಲಿ ಮಗನಿಗೆ ಅಡ್ಮಿಶನ್ ಕೊಡಿಸಿಲ್ಲ ಎಂದು ತಾಯಿಯೊಬ್ಬರು ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರು ಕ್ಷಮೆ ಕೇಳಿದ್ದಾರೆ.
ಸುಜಾತ ಎಂಬವರು ತಮ್ಮ 7 ವರ್ಷದ ಮಗನಿಗೆ ಶಾಲೆಯಲ್ಲಿ ಅಡ್ಮಿಶನ್ ಮಾಡಿಸಲು ಕರೆದುಕೊಂಡು ಹೋಗಿದ್ದರು. ಸುಜಾತ ಸಿಂಗಲ್ ಪೆರೆಂಟ್ ಆಗಿದ್ದು, ಇದನ್ನು ತಿಳಿದ ಶಾಲೆಯ ಮುಖ್ಯಶಿಕ್ಷಕರು ಬಾಲಕನಿಗೆ ಅಡ್ಮಿಶನ್ ಕೊಡಲು ನಿರಾಕರಿಸಿದ್ದರು. ಹಾಗಾಗಿ ಸುಜಾತ ಈ ಘಟನೆ ಬಗ್ಗೆ ಟಿಕ್‍ಟಾಕ್‍ನಲ್ಲಿ ವಿಡಿಯೋ ಮಾಡಿದ್ದಾರೆ.
ಸುಜಾತ ಮಾಡಿದ ಈ ವಿಡಿಯೋ ಜೂನ್ 13ರಿಂದ ವೈರಲ್ ಆಗಲು ಶುರುವಾಯಿತು. ಇದಾದ ಬಳಿಕ ಕೆಲವು ಮಂದಿ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ, ಡೇವಿಡ್ ಫರ್ನಾಂಡಿಸ್ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
https://twitter.com/KUNALPA25129276/status/1139239103667437568?ref_src=twsrc%5Etfw%7Ctwcamp%5Etweetembed%7Ctwterm%5E1139239103667437568&ref_url=https%3A%2F%2Fwww.amarujala.com%2Fphoto-gallery%2Feducation%2Fschool-denied-admission-of-child-for-having-single-parent-mother-viral-tiktok-video-helped
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಚಾರ ಶಿಕ್ಷಣ ಇಲಾಖೆವರೆಗೂ ತಲುಪಿತು. ಬಳಿಕ ಮುಂಬೈ ಶಿಕ್ಷಣ ಇಲಾಖೆ ಶಾಲೆಗೆ ನೋಟಿಸ್ ನೀಡಿ ಉತ್ತರ ಕೇಳಿತ್ತು. ನೋಟಿಸ್ ಬಂದ ನಂತರ ಪ್ರಾಂಶುಪಾಲರು ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ. ಅಲ್ಲದೆ ಬಾಲಕನಿಗೆ ಅಡ್ಮಿಶನ್ ನೀಡಲು ಒಪ್ಪಿಕೊಂಡಿದ್ದಾರೆ.
ಪ್ರಿನ್ಸಿಪಾಲ್ ಮೊದಲು ಅಡ್ಮಿಶನ್ ಮಾಡಿಸಲು ಒಪ್ಪಿಕೊಂಡಿದ್ದರು. ಬಳಿಕ ನಾನು ಸಿಂಗಲ್ ಪೆರೆಂಟ್ ಎಂಬ ವಿಷಯ ಅವರಿಗೆ ತಿಳಿಯಿತು. ಆಗ ಅವರು ಅಡ್ಮಿಶನ್ ನೀಡಲು ನಿರಾಕರಿಸಿದ್ದರು. ಅಲ್ಲದೆ ಸಿಂಗಲ್ ಪೆರೆಂಟ್ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು ಎಂದು ಸುಜಾತ ದೂರಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]