-2200 ಹಣ, ಪಾನ್, ಎಟಿಎಂ ಕಾರ್ಡ್ ಇತ್ತು
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ.
6ನೇ ತರಗತಿಯ ಭರತ್, ಶರತ್, 5ನೇ ತರಗತಿಯ ಚೈತ್ರಾ ಮತ್ತು 3ನೇ ತರಗತಿಯ ಭೂಮಿಕಾ ಒಂದೇ ಕುಟುಂಬದ ನಾಲ್ವರು ಮಕ್ಕಳು ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಆಗ ಶಿವಪುರ ರಸ್ತೆಯ ಸೂರ್ಯ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿತ್ತು. ಅದರಲ್ಲಿ 2200 ರೂಪಾಯಿ ಹಣ, ಪಾನ್ ಹಾಗೂ ಎಟಿಎಂ ಕಾರ್ಡ್ ಇದ್ದವು.
Advertisement
ಮಕ್ಕಳು ಸಿಕ್ಕ ಪರ್ಸ್ ಅನ್ನು ಸೋಮವಾರ ಶಾಲೆಗೆ ಬಂದು ಶಿಕ್ಷಕ ಸುಖೇಶ್ ಅವರಿಗೆ ಕೊಟ್ಟಿದ್ದಾರೆ. ಶಿಕ್ಷಕರು ಸಂಬಂಧಪಟ್ಟವರಿಗೆ ಹಿಂದಿರುಗಿಸಿ ಮಕ್ಕಳ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ಮಕ್ಕಳು ಕೊಟ್ಟ ಪರ್ಸ್ ಅನ್ನು ಶಿಕ್ಷಕ ಸುಖೇಶ್, ಸಂದೀಪ್ ಅವರನ್ನು ಸಂಪರ್ಕಿಸಿ ಮಕ್ಕಳ ಕೈಯಿಂದಲೇ ಅವರಿಗೆ ಅವರ ಪರ್ಸ್ ಹಿಂದಿರುಗಿಸಿದ್ದಾರೆ. ಮಕ್ಕಳ ಪ್ರಾಮಾಣಿಕತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.