ಭೋಪಾಲ್: ಭಾರೀ ಮಳೆಯಿಂದಾಗಿ 20ಕ್ಕೂ ಅಧಿಕ ಮಕ್ಕಳಿದ್ದ ಶಾಲಾ ಬಸ್‍ವೊಂದು ಚರಂಡಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮಸ್ಥರ ಗುಂಪು ಟ್ರ್ಯಾಕ್ಟರ್ ಮತ್ತು ಹಗ್ಗವನ್ನು ಬಳಸಿ ಚರಂಡಿಯಲ್ಲಿ ಸಿಲುಕಿದ್ದ ಬಸ್‌ನ್ನು ಹೊರತೆಗೆದರು. ಘಟನೆ ಸಂಬಂಧಿಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್
Advertisement
A school bus got stuck in a drain of water near Bikalkhedi village of Shajapur district, more than 24 school children were in the bus, the villagers present on the spot showed agility and pulled the bus out of the water by tying a rope with the help of a tractor.#madhyapradesh pic.twitter.com/ZvfnKVrBLG
— Siraj Noorani (@sirajnoorani) July 23, 2022
ಈ ವೀಡಿಯೋದಲ್ಲಿ ಬಸ್ ಚರಂಡಿಯಲ್ಲಿ ಸಿಲುಕಿದೆ. ಈ ಸಂದರ್ಭದಲ್ಲಿ ನೀರೆಲ್ಲವೂ ಬಸ್‍ನೊಳಗೆ ಬರುತ್ತಿದ್ದಂತೆ ಸಹಾಯಕ್ಕಾಗಿ ಬಸ್‍ನಲ್ಲಿದ್ದ ಮಕ್ಕಳು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಗ್ರಾಮಸ್ಥರು ಬಂದು ಬಸ್‍ನಲ್ಲಿದ್ದ ಮಕ್ಕಳನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಗಬ್ಬೆದ್ದು ನಾರುತ್ತಿದೆ ಬೆಂಗಳೂರಿನ ಚೆಂದದ ಹಲಸೂರು ಕೆರೆ..!
Advertisement
Advertisement
ಮಧ್ಯಪ್ರದೇಶದ ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ನೀಡಿದೆ.