ಬೆಂಗಳೂರು: ಒಂದೇ ಆಸ್ಪತ್ರೆ ನಿರ್ವಹಣೆ ಮತ್ತು ರಿಪೇರಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ ತೋರಿಸಲಾಗಿದೆ. ಕೆಲಸ ಆಗದಿದ್ರೂ ಬಿಲ್ ಮಾತ್ರ ರಿಲೀಸ್ ಆಗಿದೆ. ಆರೋಗ್ಯ ಇಲಾಖೆಯ ಕರ್ಮಕಾಂಡದ ಸ್ಟೋರಿ ಇದು.
Advertisement
ಹೌದು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ದೊಡ್ಡ ಹಗರಣ ನಡೆದಿದೆ. ಆಸ್ಪತ್ರೆಯ ರಿಪೇರಿ ಹಾಗೂ ವಿವಿಧ ಕಾಮಗಾರಿಗೆ ಖರ್ಚಾಗಿರೋದು ಬರೋಬ್ಬರಿ 4.50 ಕೋಟಿ ರೂ. ಅಲ್ಲದೆ ನಿಯಮಗಳೆಲ್ಲ ಗಾಳಿಗೆ ತೂರಿ ಬೇಕಾದವರಿಗೆ ಟೆಂಡರ್ ನೀಡಲಾಗಿದೆ.
Advertisement
Advertisement
ಬಣ್ಣ ಬಳಿಯೋಕೆ 35 ಲಕ್ಷ ರೂ., ಸ್ಟೀಲ್ ಕಂಬಿಗಳ ಅಳವಡಿಕೆಗೆ 25 ಲಕ್ಷ ರೂ., ಮೇಚ್ಛಾವಣಿ ರಿಪೇರಿಗೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಗೋಡೆ ಕಿತ್ತು ಹೋಗಿದ್ರು ಅದಕ್ಕೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿದ್ದಾಗಿ ಲೆಕ್ಕ ನೀಡಿದ್ದಾರೆ. ವಾರ್ಡ್‍ಗಳು ಹಾಗೇ ಇದ್ರು ವಾರ್ಡ್ ರಿಪೇರಿ ಹೆಸರಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕೆಲಸವೇ ಆಗಿಲ್ಲವಾದ್ರೂ ದುಡ್ಡು ಮಾತ್ರ ರಿಲೀಸ್ ಆಗಿದೆ. ಹೀಗೆ ಕೆಸಿ ಜನರಲ್ ಆಸ್ಪತ್ರೆ ರಿಪೇರಿ ಖರ್ಚಿಗೆ ಆಗಿರೋದು ನಾಲ್ಕೂವರೆ ಕೋಟಿ ರೂ. RTI ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯ ಈ ಕರ್ಮಕಾಂಡ ಬಯಲಾಗಿದೆ.
Advertisement
ಅತೀ ತುರ್ತು ಕೆಲಸ ಅಂತ ಟೆಂಡರ್ ಕರೆಯದೇ ಕಾಮಗಾರಿ ನೀಡಲಾಗಿದೆ. ಬೇಕಾದವರಿಗೆ ಕೆಲಸ ಕೊಟ್ಟು ಕೋಟಿ ಕೋಟಿ ಹಣ ಗುಳುಂ ಮಾಡಿರೋ ಆರೋಪ ಕೇಳಿಬಂದಿದೆ.