ನವದೆಹಲಿ: ದೇಶದಲ್ಲಿ ಪರಿಶಿಷ್ಟ ಜಾತಿ (ಎಸ್‍ಸಿ), ಪರಿಶಿಷ್ಟ ಪಗಂಡದ (ಎಸ್‍ಟಿ) ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳು 2019ಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ ಶೇ.9.4ರಷ್ಟು ಮತ್ತು ಶೇ.9.3ರಷ್ಟು ಹೆಚ್ಚಾಗಿವೆ ಎಂದು ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
- Advertisement
2020ರಲ್ಲಿ ಎಸ್‍ಸಿ ಗಳ ವಿರುದ್ಧ 50,291 ಅಪರಾಧಗಳು ದಾಖಲಾಗಿವೆ. 2019ರಲ್ಲಿ 45,961 ಪ್ರಕರಣ ದಾಖಲಾಗಿದ್ದವು. 2020ರಲ್ಲಿ ಎಸ್‍ಟಿ ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ 7,570 ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ಆಪ್ತ ಸ್ನೇಹಿತನ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಸಿಎಂ
- Advertisement
2020ರಲ್ಲಿ ಎಸ್‍ಸಿ ಗಳ ವಿರುದ್ಧದ ಅಪರಾಧಗಳಲ್ಲಿ ಸಿಂಪಲ್ ಹರ್ಟ್ ಎಂದು ಒಟ್ಟು 16,543 (ಶೇ.32.9) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿದೆ. ಜೊತೆಗೆ ಎಸ್‍ಸಿ, ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 4,273 (ಶೇ.8.5) ಅಪರಾಧಗಳು ಮತ್ತು 3,788 ಕ್ರಿಮಿನಲ್ ಬೆದರಿಕೆಗಳು ಎಸ್‍ಸಿ ಗಳ ವಿರುದ್ಧ ನಡೆದಿವೆ.
ಎಸ್‍ಟಿಗಳ ವಿಷಯದಲ್ಲಿ ನಡೆದ ಒಟ್ಟು ಅಪರಾಧಗಳಲ್ಲಿ, ಸಿಂಪಲ್ ಹರ್ಟ್ ಎಂದು ಒಟ್ಟು 2,247(ಶೇ.27.2) ಅಪರಾಧಗಳು ಮತ್ತು ದೌರ್ಜನ್ಯಗಳು ನಡೆದಿವೆ. ಅತ್ಯಾಚಾರ ಅಪರಾಧಗಳು 1,137(ಶೇ.13.7), ಮಹಿಳೆಯರ ಮೇಲೆ ಹಲ್ಲೆ ನಡೆದಿರುವ 885 (ಶೇ.10.7) ಪ್ರಕರಣಗಳು ದಾಖಲಾಗಿವೆ.
ಎಸ್‍ಸಿಗಳ ವಿರುದ್ಧ ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಧಿಕ ಅಪರಾಧಗಳು ನಡೆದಿವೆ. ಎಸ್‍ಟಿ ಗಳ ವಿರುದ್ಧ ಅತ್ಯಧಿಕ ಅಪರಾಧಗಳು ಕೇರಳ, ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳಿದೆ.