ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

Public TV
1 Min Read
SBI

ನವದೆಹಲಿ: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೌದು, ಎಸ್‍ಬಿಐ ದಿನವೊಂದರ ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಸದ್ಯ 40 ಸಾವಿರ ರೂಪಾಯಿ ಇದ್ದು, ಇದನ್ನು 20 ಸಾವಿರ ರೂಪಾಯಿಗೆ ಇಳಿಸಲು ನಿರ್ಧಾರ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ನೂತನ ನಿಯಮವು ಇದೇ ಅಕ್ಟೋಬರ್ 31 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

rb 1528394618

ಎಟಿಎಂ ವಹಿವಾಟುಗಳಲ್ಲಿನ ವಂಚನೆ ಪ್ರಕರಣ ದಿನೇ ದಿನೇ ಜಾಸ್ತಿಯಾಗುತ್ತಿರುವುದರಿಂದ ಎಸ್‍ಬಿಐ ಈ ಮಹತ್ವ ನಿರ್ಧಾರಕ್ಕೆ ಮುಂದಾಗಿದೆ. ಸದ್ಯ ಎಸ್‍ಬಿಐ ಗ್ರಾಹಕರು 40 ಸಾವಿರ ರೂಪಾಯಿಯನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ ನೂತನ ನಿಯಮ ಜಾರಿಯಾದ ಮೇಲೆ 20 ಸಾವಿರ ರೂಪಾಯಿಯನ್ನು ಮಾತ್ರ ಡ್ರಾ ಮಾಡಿಕೊಳ್ಳಬೇಕಾಗುತ್ತದೆ.

ಈ ನೂತನ ನಿಯಮವು ನಗದು ರಹಿತ ವಹಿವಾಟನ್ನು ಉತ್ತೇಜಿಸಲು ಸಹ ಸಹಕಾರಿಯಾಗುತ್ತದೆ. ಅಲ್ಲದೇ ಈ ಬಗ್ಗೆ ತನ್ನ ಅಧೀನದಲ್ಲಿ ಬರುವ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದು, ಗ್ರಾಹಕರಿಗೆ  ತಿಳಿಸಲು ಸೂಚನಾ ಫಲಕಗಳನ್ನು ಅಳವಡಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

state bank of india

ಈ ಬಗ್ಗೆ ಎಸ್‍ಬಿಐನ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ಮಾತನಾಡಿ, ಎಟಿಎಂ ಸಂಬಂಧಿಸಿದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಸಂಬಂಧ ಎಟಿಎಂ ಡ್ರಾ ಮಿತಿಯನ್ನು ಕಡಿಮೆಗೊಳಿಸಲು ಚಿಂತನೆ ನಡೆಸಿದ್ದೇವೆ. ಸದ್ಯ 40 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿಗೆ ಡ್ರಾ ಮಿತಿಯನ್ನು ಕಡಿಮೆಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *