ಬೆಂಗಳೂರು: ಇಲ್ಲಿನ ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ (SBI Bank) ಹೋಗಿದ್ದ ಗ್ರಾಹಕರೊಬ್ಬರ ಜೊತೆ ಭಾಷಾ ವಿಷಯಕ್ಕೆ ಬ್ಯಾಂಕ್ ಮ್ಯಾನೇಜರ್ ಉದ್ಧಟತನದಲ್ಲಿ ವರ್ತಿಸಿದ್ದಾರೆ. ಕನ್ನಡ ಮಾತನಾಡಿ ಅಂದಿದ್ದಕ್ಕೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ ಮೆರೆಯುವ ಮೂಲಕ ಕನ್ನಡಿಗರನ್ನ (Kannadigas) ಕೆಣಕುವ ಕೆಲಸ ಮಾಡಿದ್ದಾರೆ.
ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ ಕೆಲಸದ ನಿಮಿತ್ತ ಗ್ರಾಹಕ ಹೋದಾಗ ಕನ್ನಡ ಮಾತನಾಡುವಂತೆ ಕೇಳಿದ್ದಾರೆ. ಆದರೆ ಕನ್ನಡ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್ ಹಾಕಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡವನ್ನೇ ಮಾತಾಡಲ್ಲ. ಏನೇ ಆದರೂ ಅಂತ ಹೇಳುವ ಮೂಲಕ ಕರ್ನಾಟಕದಲ್ಲಿ ಮತ್ತೆ ಕನ್ನಡಿಗರನ್ನ ಕೆರಳಿಸುವಂತ ಹೇಳಿಕೆ ಕೊಟ್ಟು, ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಣಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಕಳೆದ ಕೆಲ ದಿನದ ಹಿಂದಷ್ಟೇ ಗಾಯಕ ಸೋನು ನಿಗಮ್ ಕೂಡ ಇಂತಹದ್ದೇ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಘಟನೆ ಮಾಸುವ ಮುನ್ನವೆ ಉತ್ತರ ಭಾರತ ಮೂಲದ ಬ್ಯಾಂಕ್ ಮ್ಯಾನೇಜರ್ ಈ ರೀತಿ ವರ್ತನೆ ತೋರಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಮೋದಿಗೆ ಗೊತ್ತಿತ್ತು, ಅದಕ್ಕೆ ಕಾಶ್ಮೀರ ಭೇಟಿ ಕ್ಯಾನ್ಸಲ್ ಮಾಡಿಸಿದ್ರು – ಮಲ್ಲಿಕಾರ್ಜುನ ಖರ್ಗೆ