ಮುಂಬೈ: ನಟಿ ಸಾಯೇಷಾ ಸೈಗಲ್ ಅವರು ಮಗಳು ಹುಟ್ಟಿದ ನಂತರ ತೂಕ ಇಳಿಸಿಕೊಂಡಿದ್ದಾರೆ. ತಾವು ವೇಟ್ ಲಾಸ್ ಮಾಡಲು ಪಟ್ಟಿರುವ ಕಷ್ಟದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ. ನೀವು ಸ್ಥಿರವಾಗಿದ್ದು, ಶ್ರದ್ಧೆಯಿಂದ ವರ್ಕೌಟ್ನತ್ತ ಗಮನ ಹರಿಸಿದ್ರೆ ತೂಕ ಇಳಿಸಿಕೊಳ್ಳಬಹುದು. ನೈಜತೆಗೆ ಹತ್ತಿರವಲ್ಲದ ಗುರಿಯನ್ನು ಇಟ್ಟುಕೊಳ್ಳಬಾರದು. ಪ್ರತಿ ಮಹಿಳೆಯು ಕೂಡ ಸುಂದರವಾಗಿರುತ್ತಾಳೆ. ಕೊಬ್ಬಿನಿಂದ ಕೂಡಿರುವ ನಮ್ಮ ದೇಹವನ್ನು ಸಣ್ಣವಾಗಿಸುವುದರ ಜೊತೆಗೆ ಆರೋಗ್ಯಕರವಾಗಿರೋದು ನಮ್ಮ ಟಾರ್ಗೆಟ್ ಆಗಿರಬೇಕು. ಸೆಲೆಬ್ರಿಟಿ ಅಂತ ನೋಡಬೇಡಿ, ನಿಮ್ಮ ಗುರಿ ನಿರ್ಧರಿಸಿ. ಪ್ರತಿಯೊಬ್ಬ ವ್ಯಕ್ತಿಯ ದೇಹ, ಆರೋಗ್ಯ ಸ್ಥಿತಿ ಕೂಡ ವಿಭಿನ್ನವಾಗಿರುತ್ತದೆ. ಈ ಫೋಟೋ ಫಿಟ್ನೆಸ್ ಮತ್ತು ನನ್ನ ಲೈಫ್ಸ್ಟೈಲ್ನನ್ನು ತೋರಿಸಿಕೊಡುತ್ತದೆ. ಇದು ನನಗೆ ಖುಷಿ ಕೊಡುತ್ತದೆ ಎಂದು ಸಾಯೇಷಾ ಸೈಗಲ್ ಇನ್ಸ್ಟಾಗ್ರಾಮ್ನಲ್ಲು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಪಿಲ್ ದೇವ್ ಆಗಲು ನಿತ್ಯ 4 ಗಂಟೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ರಣವೀರ್ ಸಿಂಗ್!
View this post on Instagram
ಅನೇಕ ದಿನಗಳಿಂದ ಸಾಯೇಷಾ, ಆರ್ಯ ಪ್ರೀತಿ ಮಾಡುತ್ತಿದ್ದರು. ನಂತರ ಹಿರಿಯ ಆಶೀರ್ವಾದ ಪಡೆದು 2019ರ ಮಾರ್ಚ್ನಲ್ಲಿ ಆರ್ಯ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ಜುಲೈ 25ರಂದು ಸಾಯೇಷಾ ಸೈಗಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮನೆಗೆ ಹೊಸ ಸದಸ್ಯೆ ಎಂಟ್ರಿ ನೀಡಿದ್ದರ ಕುರಿತು ಆರ್ಯ ದಂಪತಿ ಮೊದಲು ಮಾಹಿತಿ ಹಂಚಿಕೊಂಡಿರಲಿಲ್ಲ. ಅವರ ಸಂಬಂಧಿಯೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ಸಾಯೇಷಾ ಫಿಟ್ನೆಸ್ ಅತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ