ಮುಂಬೈ: ಜಾನುವಾರುಗಳಿಗೆ (Cattle) ಮಾರಕವಾಗಿ ಪರಿಣಮಿಸಿರುವ ಲಂಪಿ ವೈರಸ್‌ನಿಂದಾಗಿ (Lumpy Virus) ರಾಜಸ್ಥಾನದಲ್ಲಿ ಪ್ರತೀ ದಿನ ನೂರಾರು ಹಸುಗಳು ಸಾವನ್ನಪ್ಪುತ್ತಿವೆ. ದೇಶದ 10 ಕ್ಕೂ ಹೆಚ್ಚು ರಾಜ್ಯಗಳಿಗೆ ಹರಡಿರುವ ಈ ವೈರಸ್ ಬಗ್ಗೆ ಎಲ್ಲೆಡೆ ಆತಂಕ ವ್ಯಕ್ತವಾಗಿದೆ.
ಇದೀಗ ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ (Shikhar Dhawan) ಕೂಡಾ ವೈರಸ್‌ನಿಂದಾಗಿ ಮುಗ್ಧ ಜಾನುವಾರುಗಳು ಸಾವನ್ನಪ್ಪುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
Advertisement
Advertisement
ಈಗಾಗಲೇ ಹೆಚ್ಚಿನ ಸಂಖ್ಯೆಯ ಜಾನುವಾರುಗಳು ಲಂಪಿ ವೈರಸ್‌ಗೆ ತುತ್ತಾಗಿವೆ. ಅದೆಷ್ಟೋ ಹಸುಗಳು ಸಾವನ್ನಪ್ಪಿವೆ. ಲಂಪಿ ವೈರಸ್ ವಿರುದ್ಧ ಹೋರಾಡಲು ನಾನು ಅಧಿಕಾರಿಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಮುಗ್ಧ ಜಾನುವಾರುಗಳನ್ನು ರಕ್ಷಿಸಿ ಎಂದು ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಓಡೆನ್ ಸ್ಮಿತ್, ಬೇಬಿ ಎಬಿಡಿ ಹೊಡಿಬಡಿ ಆಟ – ತಲಾ ಆರಾರು ಎಸೆತ ಐದೈದು ಸಿಕ್ಸ್ 60 ರನ್
Advertisement
Urging more authorities to fight this battle against #LumpySkinDisease and #SaveCows. Large number of cattle are affected and several have succumbed to it. pic.twitter.com/GSj8U9vIUX
— Shikhar Dhawan (@SDhawan25) September 23, 2022
Advertisement
ಲಂಪಿ ವೈರಸ್ ಕೆಲವು ಜಾತಿಯ ನೊಣ, ಸೊಳ್ಳೆಗಳಂತಹ ಕೀಟಗಳಿಂದ ಹರಡುತ್ತದೆ. ಹೆಚ್ಚಾಗಿ ಹಸು, ಎಮ್ಮೆ ಹಾಗೂ ಜಿಂಕೆಗಳ ಮೇಲೆ ಪರಿಣಾಮ ಬೀರುವ ಈ ವೈರಸ್‌ನಿಂದ ಜ್ವರ ಹಾಗೂ ಚರ್ಮದ ಮೇಲೆ ಗಂಟುಗಳು ಉಂಟಾಗುತ್ತವೆ. ಇದು ಜಾನುವಾರುಗಳ ಸಾವಿಗೂ ಕಾರಣವಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: 2022ರಲ್ಲಿ ಭಾರತ ಆಡಿದ್ದು 27 ಟಿ20 ಪಂದ್ಯ – ಬುಮ್ರಾ ಆಡಿದ್ದು ಬರೀ 3 ಪಂದ್ಯ!
ಜಾನುವಾರುಗಳ ವಿನಾಶವನ್ನು ಸೃಷ್ಟಿಸುತ್ತಿರುವ ಲಂಪಿ ವೈರಸ್ ಈಗಾಗಲೇ 10ಕ್ಕೂ ಹೆಚ್ಚು ರಾಜ್ಯಗಳಿಗೆ ಪ್ರವೇಶಿಸಿದೆ. ದೇಶದಲ್ಲಿ ಇಲ್ಲಿಯವರೆಗೆ 75 ಸಾವಿರಕ್ಕೂ ಹೆಚ್ಚು ಜಾನುವಾರುಗಳ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.