ಮುಂಬೈ: ಸಾವರ್ಕರ್ (Savarkar) ಅವರು ಬ್ರಿಟಿಷರಿಗೆ (British) ಪತ್ರ ಬರೆದು, ತಾವು ವಿಧೇಯ ಸೇವಕನಾಗಿರುತ್ತೇನೆ ಎಂದು ಅವರಲ್ಲಿ ಬೇಡಿಕೊಂಡಿದ್ದರು ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಹಾರಾಷ್ಟ್ರದಲ್ಲಿ (Maharashtra) ಸಾಗುತ್ತಿದ್ದು, ಈ ವೇಳೆ ಮಾತನಾಡಿದ ರಾಹುಲ್, ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ. ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ. ಇದು ಸಾವರ್ಕರ್ ಅವರೇ ಬ್ರಿಟಿಷರಿಗೆ ಬರೆದಿರುವ ಪತ್ರ ಎಂದು ಪತ್ರವೊಂದನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.
Advertisement
सावरकर जी ने अंग्रेजों की मदद की। उन्होंने अंग्रेजों को चिट्ठी लिखकर कहा – सर, मैं आपका नौकर रहना चाहता हूं।
– श्री @rahulgandhi pic.twitter.com/1sKszyDXR0
— Congress (@INCIndia) November 17, 2022
Advertisement
ನಾನು ನಿಮ್ಮ ವಿಧೇಯ ಸೇವಕನಾಗಿ ಉಳಿದುಕೊಳ್ಳಲು ಬಯಸುತ್ತೇನೆ ಎಂದು ಪತ್ರದಲ್ಲಿದ್ದ ಕೊನೆಯ ಸಾಲನ್ನು ಓದಿದ ರಾಹುಲ್, ಸಾವರ್ಕರ್ ಅವರು ಭಯದಿಂದಲೇ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ಸೇರಿದಂತೆ ಇತರ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿ ಕಾರಿದರು.
Advertisement
ಅವರು ಅಂಡಮಾನ್‌ನಲ್ಲಿ 2-3 ವರ್ಷಗಳ ಕಾಲ ಜೈಲಿನಲ್ಲಿದ್ದು, ನಿರಂತರವಾಗಿ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಲವ್ ಜಿಹಾದ್‌ಗೆ ಕಠಿಣ ಕಾನೂನು ತನ್ನಿ – ದೆಹಲಿ ಪ್ರಕರಣ ಉಲ್ಲೇಖಿಸಿ ಯೋಗಿ ಆದಿತ್ಯನಾಥ್‌ಗೆ ಬಿಜೆಪಿ ಶಾಸಕ ಪತ್ರ
Advertisement
ರಾಗಾ ಹೇಳಿಕೆಗೆ ಠಾಕ್ರೆ ತಿರುಗೇಟು:
ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಸಾವರ್ಕರ್ ಅವರ ಬಗ್ಗೆ ತಮ್ಮ ಪಕ್ಷಕ್ಕೆ ಅಪಾರವಾದ ಗೌರವವಿದೆ. ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ.
ಸಾವರ್ಕರ್ ಅವರು ಬೇರೆ ಹೆಸರಿನಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಅವರು ಎಷ್ಟು ಧೈರ್ಯಶಾಲಿ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆದು, ಅವರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಸಾವರ್ಕರ್ ಮೇಲೆ ನಮಗೆ ಅಪಾರವಾದ ನಂಬಿಕೆ ಹಾಗೂ ಗೌರವವಿದೆ. ಅದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮತದಾರರ ಪಟ್ಟಿ ದುರ್ಬಳಕೆ ಹಿಂದೆ ಕಾಂಗ್ರೆಸ್ ಮಾಡಿದ್ದನ್ನೇ ಈಗ ಬಿಜೆಪಿ ಮಾಡುತ್ತಿದೆ: ಹೆಚ್‍ಡಿಕೆ