ಲಕ್ನೋ: ಲವ್ ಜಿಹಾದ್‌ಗೆ (love jihad) ಕಠಿಣ ಶಿಕ್ಷೆಯಾಗಬೇಕು. ಘೋರ ಅಪರಾಧಗಳಿಗೆ ಸಂಬಂಧಿಸಿದಂತೆ ರಾಜ್ಯದ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು ಎಂದು ದೆಹಲಿ ಕೊಲೆ ಪ್ರಕರಣ ಉಲ್ಲೇಖಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಬಿಜೆಪಿ ಶಾಸಕ ರಾಜೇಶ್ವರ್ ಸಿಂಗ್ (Rajeshwar Singh) ಪತ್ರ ಬರೆದಿದ್ದಾರೆ.
ಇಂತಹ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ, ಆರೋಪಿಗಳಿಗೆ ಯಾವುದೇ ಜಾಮೀನು ನೀಡದಿರುವುದು, ಅತ್ಯಾಚಾರ ಮತ್ತು ಕೊಲೆಗೆ ಮರಣದಂಡನೆ, ಸಾಕ್ಷಿಗಳಿಗೆ ವಿಶೇಷ ರಕ್ಷಣೆ ಮತ್ತು ಅಂತಹ ಪ್ರಕರಣಗಳಲ್ಲಿ ಅತ್ಯಾಚಾರಕ್ಕಾಗಿ ಜೀವಾವಧಿ ಶಿಕ್ಷೆಯಂತಹ ಬದಲಾವಣೆಗಳನ್ನು ಕಾನೂನಿನಲ್ಲಿ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ತಲೆ ಬುರುಡೆ ಸುಟ್ಟು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ ಅಫ್ತಾಬ್
Advertisement
Advertisement
ಶಾಸಕರ ಪತ್ರದ ಪ್ರತಿಯನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೂ ಕಳುಹಿಸಲಾಗಿದೆ. ಕ್ರಿಮಿನಲ್ ಕಾರ್ಯವಿಧಾನದ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಶಾಸಕ ಸಿಂಗ್ ಒತ್ತಾಯಿಸಿದ್ದಾರೆ.
Advertisement
ದೆಹಲಿ ನಗರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಘಟನೆಯು ದೇಶಾದ್ಯಂತ ವರದಿಯಾಗಿದೆ. ಲವ್ ಜಿಹಾದ್ ಅಪರಾಧಗಳನ್ನು ಇದು ಪ್ರತಿಬಿಂಬಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ್ದ ಅಫ್ತಾಬ್!
Advertisement
ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಈ ಹಿಂದೆ ಮಾಡಿದಂತೆ ರಾಜ್ಯ ಶಾಸಕಾಂಗದ ಮೂಲಕ ಶಾಸನಕ್ಕೆ ತಿದ್ದುಪಡಿಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ಶಾಸಕರು ಹೇಳಿದ್ದಾರೆ.
ಮುಂಬೈ ಮೂಲದ 27 ವರ್ಷದ ಶ್ರದ್ಧಾ ವಾಕರ್ (Shraddha Walkar) ಅವರನ್ನು ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯಲ್ಲಿ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ (Aftab Poonawala) ಕೊಲೆ ಮಾಡಿದ್ದ. ಆಕೆಯ ಕತ್ತು ಹಿಸುಕಿ ಕೊಂದ ನಂತರ, ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಕತ್ತರಿಸಿದ ದೇಹದ ಭಾಗಗಳನ್ನು ಶೇಖರಿಸಿಡಲು ರೆಫ್ರಿಜರೇಟರ್ ಕೂಡ ಬಳಿಸಿದ್ದ. ಇಂತಹ ಭೀಕರ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾರಂಥ ಹೆಣ್ಣುಮಕ್ಕಳು ಒಳ್ಳೆ ಹುಡುಗರನ್ನ ಆಯ್ಕೆ ಮಾಡ್ಕೋಬೇಕು; ಅಫ್ತಾಬ್‌ನ ನೇಣಿಗೆ ಹಾಕಿ – ರಾವತ್