ಬಾಗಲಕೋಟೆ: ಸೋನಿಯಾ ಗಾಂಧಿಗೂ ಈ ದೇಶಕ್ಕೂ ಏನು ಸಂಬಂಧ ಎಂದು ನಾನು ವಾಪಸ್ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (DK Shivakumar) ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್‌ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸೋನಿಯಾ ಗಾಂಧಿಗೆ ಈ ದೇಶಕ್ಕೆ ಸಂಬಂಧವೇ ಇಲ್ಲ. ಸೋನಿಯಾಗಾಂಧಿ (Sonia Gandhi) ವಿದೇಶದಿಂದ ಬಂದ ವ್ಯಕ್ತಿ. ನಾನು ವೈಯಕ್ತಿಕವಾಗಿ ಅವರನ್ನು ಟೀಕೆ ಮಾಡಲು ಇಷ್ಟ ಪಡುವುದಿಲ್ಲ. ಆದರೆ ಕಾಂಗ್ರೆಸ್ ಯಾವ ದಿಕ್ಕಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ರಾಹುಲ್ ಗಾಂಧಿ ಅನುಭವಿಸಿದ್ದಾರಾ? ತಿಹಾರ್ ಜೈಲಿಗೆ ಡಿಕೆಶಿ ಹೋಗಿದ್ದು ಇರಬಹುದು. ಆದರೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಶಿಷ್ಯಂದಿರಿಗೆ ತಿಹಾರ್ ಜೈಲು ಪರಪ್ಪನ ಅಗ್ರಹಾರ ಸಂಬಂಧ ಮಾತ್ರ ಗೊತ್ತು. ಇದು ಅವರು ವೈಯಕ್ತಿಕವಾಗಿ ಮಾಡಿದಂತಹ ರಾಷ್ಟ್ರದ್ರೋಹಿ ಚಟುವಟಿಕೆಗಳಿಂದ ಜೈಲಿಗೆ ಹೋದರು. ಆದರೆ ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋಗಿದ್ದರು. ವೀರ ಸಾವರ್ಕರ್ ಅವರು ಅಂಡಮಾನ್‍ನ ಜೈಲಲ್ಲಿ ಎಷ್ಟು ವರ್ಷ ಇದ್ದರು? ಅಲ್ಲಿನ ಕಠಿಣ ಶಿಕ್ಷೆ ಎಷ್ಟರ ಮಟ್ಟಿಗೆ ಅನುಭವಿಸಿದರು ಅನ್ನೊದು ಗೊತ್ತಿಲ್ಲ. ಇತಿಹಾಸ ನೋಡಿಕೊಂಡು ಡಿಕೆಶಿ ಮಾತಾಡಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸುಳ್ಳಿನ ರಾಜ – ನಮ್ಮ ಒತ್ತಾಯದಿಂದ ಅಧಿವೇಶನ ನಡೆಯುತ್ತಿದೆ: ಡಿಕೆಶಿ ಕಿಡಿ
ರಾಜಕಾರಣ ಮಾಡಲಿ ನಾವು ಮಾಡ್ತೇವೆ ಇಲ್ಲ ಅಂತಲ್ಲ. ಇಂದಿರಾ ಗಾಂಧಿಯವರನ್ನು ಪಾಕಿಸ್ತಾನ – ಭಾರತ ಯುದ್ಧದ ಸಮಯದಲ್ಲಿ ವಾಜಪೇಯಿಯವರು ದುರ್ಗೆ ಅಂತ ಕರೆದರು. ದೇಶದ ಸಂಕಷ್ಟದ ಸಮಯದಲ್ಲೂ ಇಂದಿರಾ ಗಾಂಧಿಯನ್ನು ಹೊಗಳಿದರು. ಅದೇ ಇಂದಿರಾ ಗಾಂಧಿ ವಾಜಪೇಯಿ, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ ನಾಯಕರನ್ನು ತುರ್ತು ಪರಿಸ್ಥಿತಿ ತಂದು ಜೈಲು ಸೇರಿಸಿದರು. ಅದನ್ನು ಬಿಜೆಪಿ ವಿರೋಧಿಸಿತು. ಯಾವ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು ಎಂಬ ಕಲ್ಪನೆ ಕಾಂಗ್ರೆಸ್‍ಗೆ ಇಲ್ಲ. ಇಡೀ ರಾಜ್ಯ ದೇಶದ ಜನರಿಗೆ ಕಾಂಗ್ರೆಸ್ ಬಗ್ಗೆ ಅಸಹ್ಯ ಹುಟ್ಟುತ್ತದೆ. ಆ ರೀತಿ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಏಯ್ ಯತ್ನಾಳ್ – ಕಾರಿಡಾರ್‌ನಲ್ಲಿ ಸಿದ್ದು ಇತಿಹಾಸ ಪಾಠ