ಮಂಡ್ಯ: ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ (Savarkar) ಅವರನ್ನು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ವಾದಿಸುವ ಕಾಂಗ್ರೆಸ್ (Congress) ಮತ್ತೊಮ್ಮೆ ಗೊಂದಲಕ್ಕೆ ಸಿಲುಕಿಕೊಂಡಿದೆ. ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಪೋಸ್ಟರ್‌ನಲ್ಲಿ (Poster) ಮತ್ತೊಮ್ಮೆ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಆದರೆ ಇದು ದುಷ್ಕರ್ಮಿಗಳ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ ಇದೀಗ ಕರ್ನಾಟಕದ ಮಂಡ್ಯ (Mandya) ಜಿಲ್ಲೆಯನ್ನು ತಲುಪಿದೆ. ಆದರೆ ಅಲ್ಲಿ ಈ ಯಾತ್ರೆಗೆ ಸಂಬಂಧಪಟ್ಟ ಒಂದು ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೋಟೋಗಳೂ ಕಂಡುಬಂದಿವೆ.
Advertisement
Advertisement
ಈ ಪೋಸ್ಟರ್ ಶಾಂತಿನಗರ ಶಾಸಕ ಹ್ಯಾರಿಸ್‌ಗೆ ಸೇರಿದ್ದು ಎಂದು ಸುದ್ದಿ ಹಬ್ಬುತ್ತಲೇ ಅವರು ಮಾತನಾಡಿ, ಇದು ಕೆಲ ಕಿಡಿಗೇಡಿಗಳ ಕೃತ್ಯ, ನಾವು ಮಾಡಿರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲೆಯಲ್ಲಿ ದೂರು ದಾಖಲಿಸುವುದಾಗಿಯೂ ಹ್ಯಾರಿಸ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಭಗವಾಧ್ವಜದ ಫೋಟೋ- ಸ್ಟೇಟಸ್ ಹಾಕಿದ್ದ 8 ಮಂದಿ ವಿರುದ್ಧ ಪ್ರಕರಣ
Advertisement
Advertisement
ಇದಕ್ಕೂ ಮೊದಲು ಸೆಪ್ಟೆಂಬರ್ 21 ರಂದು ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯ ಪೋಸ್ಟರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಸಾಲಿನಲ್ಲಿ ಸಾವರ್ಕರ್ ಫೋಟೋ ಕೂಡಾ ಕಾಣಿಸಿಕೊಂಡಿತ್ತು. ಬಳಿಕ ಅದು ಪ್ರಿಂಟಿಂಗ್ ಮಿಸ್ಟೇಕ್ ಎಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ಕಾರ್ಯಕರ್ತರು, ಅದರ ಮೇಲೆ ಮಹಾತ್ಮಾ ಗಾಂಧೀಜಿಯವರ ಫೋಟೋ ಅಂಟಿಸಿ ಸಾವರ್ಕರ್ ಫೋಟೋವನ್ನು ಮುಚ್ಚಿ ಹಾಕಿದ್ದರು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್