ರಿಯಾದ್: ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೂಲಕ ದೇಶಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಸೌದಿ ಅರೇಬಿಯಾದ ನ್ಯಾಯಾಲಯವು ಮಹಿಳೆಯೊಬ್ಬರಿಗೆ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈ ತಿಂಗಳಲ್ಲಿ ನಡೆದ ಎರಡನೇ ಪ್ರಕರಣವಾಗಿದೆ.
ಸೌದಿ ಅರೇಬಿಯಾದ ಅತಿದೊಡ್ಡ ಬುಡಕಟ್ಟು ಜನಾಂಗದವರಾದ ನೌರಾ ಬಿಂಟ್ ಸಯೀದ್ ಅಲ್-ಕಹ್ತಾನಿ ಅವರು ಸಮಾಜದ ಒಗ್ಗಟ್ಟನ್ನು ಅಡ್ಡಿಪಡಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ಆರೋಪಿಸಿದ ನಂತರ ಸುಮಾರು ಅರ್ಧ ಶತಮಾನದವರೆಗೆ ಜೈಲು ಶಿಕ್ಷೆ ವಿಧಿಸಲಾಯಿತು. ಇದನ್ನೂ ಓದಿ: ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ
Advertisement
Advertisement
ಅಲ್-ಕಹ್ತಾನಿ ಮಾಹಿತಿ ಜಾಲದ ಮೂಲಕ ಸಾರ್ವಜನಿಕ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಅಲ್-ಕಹ್ತಾನಿ ಆನ್‌ಲೈನ್‌ನಲ್ಲಿ ಏನನ್ನು ಪೋಸ್ಟ್ ಮಾಡಿದ್ದಾರೆ. ಅವರ ವಿಚಾರಣೆಯನ್ನು ಎಲ್ಲಿ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ʻಇದು ವಿಶೇಷ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಧಿಸಲಾದ ಹೊಸ ಶಿಕ್ಷೆಯಂತೆ ತೋರುತ್ತದೆʼ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಂಶೋಧನಾ ನಿರ್ದೇಶಕ ಅಬ್ದುಲ್ಲಾ ಅಲಾವುದ್ ತಿಳಿಸಿದ್ದಾರೆ. ಇದನ್ನೂ ಓದಿ: ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಮೊದಲ ಹಿಂದೂ ದೇವಾಲಯ – ಜೈಶಂಕರ್ ಭೇಟಿ
Advertisement
ಅಲ್-ಕಹ್ತಾನಿ ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಜೈಲಿಗೆ ಹಾಕಲಾಯಿತು ಎಂದು ಅಲೌದ್ ಹೇಳಿದ್ದಾರೆ.