InternationalLatestLeading NewsMain Post

ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

ಲಿಸ್ಬನ್: ಭಾರತೀಯ ಗರ್ಭಿಣಿ ಪ್ರವಾಸಿಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆಯಿಲ್ಲದೇ ಪೋರ್ಚುಗಲ್‍ನಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.

ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ 34 ವರ್ಷದ ಭಾರತೀಯ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಸಮಯದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಟೀಕೆಗೆ ಒಳಗಾಗಿದೆ. ಹೀಗಾಗಿ ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ.

ಈ ವೇಳೆ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಮಾತನಾಡಿ, ಇನ್ನೂ ಮುಂದೆ ಯಾವುದೇ ಷರತ್ತುಗಳನ್ನು ಹೊಂದಿಲ್ಲ. ರಾಜೀನಾಮೆಯನ್ನು ಪ್ರಧಾನಮಂತ್ರಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಈ ರಾಜೀನಾಮೆಯನ್ನು ಲಿಸ್ಬನ್‍ನಲ್ಲಿ ಗರ್ಭಿಣಿ ಸಾವನ್ನಪ್ಪಿದ 5 ಗಂಟೆಯ ನಂತರ ಘೋಷಿಸಲಾಗಿದೆ. ಇದನ್ನೂ ಓದಿ: ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

crime

ಘಟನೆಯೇನು?: 31 ವಾರಗಳ ಗರ್ಭಿಣಿಯಾಗಿದ್ದ ಭಾರತೀಯ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಅತಿದೊಡ್ಡ ಆರೋಗ್ಯ ಸೌಲಭ್ಯಗಳಲ್ಲಿ ಒಂದಾದ ಸಾಂಟಾ ಮಾರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು. ಆದರೆ ನವಜಾತ ಶಿಶುಗಳ ವಿಭಾಗ ತುಂಬಿದ್ದರಿಂದ ಗರ್ಭಿಣಿಯನ್ನು ಡಿ ಸಾಂಟಾ ಮರಿಯಾ ಆಸ್ಪತ್ರೆಯಿಂದ ಸಾವೊ ಫ್ರಾನ್ಸಿಸ್ಕೊ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತದ ವಿರುದ್ಧ ಕೆಸಿಆರ್ ಕಿಡಿ

Live Tv

Leave a Reply

Your email address will not be published.

Back to top button