ರಿಯಾದ್: ಭಿನ್ನಮತೀಯ ಖಾತೆಗಳನ್ನು ಫಾಲೋ ಮಾಡಿ ರೀಟ್ವೀಟ್ ಮಾಡಿದ್ದಕ್ಕೆ ಸೌದಿ ಮೂಲದ ಮಹಿಳೆಗೆ ಬರೋಬ್ಬರಿ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೌದು, ಸೌದಿ ಅರೇಬಿಯಾ ಮೂಲದ ಸಲ್ಮಾ ಅಲ್ ಶೆಹಾಬ್ ಅಮೆರಿಕದ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಆ್ಯಕ್ಟಿವ್ ಆಗಿದ್ದ ಭಿನ್ನಮತೀಯರ ಖಾತೆಗಳನ್ನು ಫಾಲೋ ಹಾಗೂ ರೀಟ್ವೀಟ್ ಮಾಡುತ್ತಿದ್ದರು. ಈ ಕಾರಣಕ್ಕೆ ಸೌದಿ ಸರ್ಕಾರ ಸಲ್ಮಾಗೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ರಜೆಯ ಹಿನ್ನೆಲೆ ತಾಯ್ನಾಡಿಗೆ ಆಗಮಿಸಿದ್ದ ಸಲ್ಮಾರನ್ನು ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುವ ಹಾಗೂ ನಾಗರಿಕ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಸ್ಥಿರಗೊಳಿಸುವ ವೆಬ್‌ಸೈಟ್‌ಗಳನ್ನು ಬಳಸಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಸಲ್ಮಾಗೆ ಆರಂಭದಲ್ಲಿ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಬಳಿಕ ಅದನ್ನು 34 ವರ್ಷಗಳಿಗೆ ಹೆಚ್ಚಿಸಲಾಯಿತು. ಬಳಿಕ ಆಕೆಗೆ 34 ವರ್ಷಗಳ ಪ್ರಯಾಣ ನಿಷೇಧವನ್ನೂ ವಿಧಿಸಲಾಗಿದೆ. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ
ಸಲ್ಮಾ ತನ್ನ ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಬಯೋ ವಿಭಾಗದಲ್ಲಿ ತಾನೊಬ್ಬ ದಂತ ಆರೋಗ್ಯ ಶಾಸ್ತ್ರಜ್ಞೆ, ವೈದ್ಯಕೀಯ ಶಿಕ್ಷಣ ತಜ್ಞೆ, ಲೀಡ್ಸ್ ವಿಶ್ವವಿದ್ಯಾಲಯದ ಪಿಹೆಚ್‌ಡಿ ವಿದ್ಯಾರ್ಥಿನಿ, ಪ್ರಿನ್ಸೆಸ್ ನೌರಾ ಬಿಂಟ್ ಅಬ್ದುಲ್ರಹ್ಮಾನ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಹಾಗೂ ತಾನು ವಿವಾಹಿತೆ ಮತ್ತು ಒಂದು ಮಗುವಿನ ತಾಯಿ ಎಂದು ಬರೆದುಕೊಂಡಿದ್ದಾರೆ.
ಸಲ್ಮಾಗೆ ಆಗಿರುವ ಅನ್ಯಾಯಕ್ಕೆ ಸೌದಿಯ ಪ್ರಮುಖ ಸ್ತ್ರೀವಾದಿ ಕಾರ್ಯಕರ್ತೆ ಲೌಜೈನ್ ಅಲ್ ಹತ್ಲೌಲ್ ಖಂಡಿಸಿದ್ದಾರೆ. ಜೈಲಿನಲ್ಲಿ ಸಲ್ಮಾ ಮೇಲೆ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆಕೆಗಾಗಿರುವ ದೌರ್ಜನ್ಯದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಲು ಅವಕಾಶವನ್ನೂ ನೀಡಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರೀತಿಸಿದವಳ ಕೊಂದು ದೇಹವನ್ನು ಪೀಸ್, ಪೀಸ್ ಮಾಡ್ದ – ಪತ್ರಕರ್ತ ಅರೆಸ್ಟ್
ಟ್ವಿಟ್ಟರ್ ಕಂಪನಿಯಲ್ಲಿ ಸೌದಿ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್ ಶೇ.5 ರಷ್ಟು ಷೇರುಗಳನ್ನು ಹೊಂದಿದೆ. ಈಗ ಈ ವಿಚಾರದಿಂದಾಗಿ ಮತ್ತೆ ಟ್ವಿಟ್ಟರ್ ಸುದ್ದಿಯಲ್ಲಿದೆ. ಸೌದಿ ಸರ್ಕಾರ, ಅಲ್ಲಿನ ದೊರೆಗಳ ಬಗ್ಗೆ ಯಾರು ವಿರೋಧ ವ್ಯಕ್ತಪಡಿಸುವಂತಿಲ್ಲ. ಟೀಕೆ ವ್ಯಕ್ತಪಡಿಸಿದರೆ ಅವರನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.